Dragon Fruit: ಡ್ರ್ಯಾಗನ್​ ಫ್ರೂಟ್ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿಯಿರಿ: ಇಲ್ಲಿದೆ ಮಾಹಿತಿ

Edited By:

Updated on: Feb 05, 2023 | 9:39 PM

ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿದೆ. ಯಾವಾಗಲೂ ಆರೋಗ್ಯವಾಗಿರಲು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ವಿವಿಧ ಬಗೆಯ ಹಣ್ಣುಗಳನ್ನು ಸೇವಿಸುವುದರಿಂದ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

1 / 5
ಹಣ್ಣುಗಳನ್ನು ತಿನ್ನುವುದರಿಂದ ದೇಹವು ಜೀವಸತ್ವಗಳು ಮತ್ತು ಖನಿಜಗಳಂತಹ 
ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. 'ಡ್ರ್ಯಾಗನ್ ಫ್ರೂಟ್' ಸೂಪರ್
ಹಣ್ಣುಗಳಲ್ಲಿ ಒಂದಾಗಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಹಣ್ಣುಗಳನ್ನು ತಿನ್ನುವುದರಿಂದ ದೇಹವು ಜೀವಸತ್ವಗಳು ಮತ್ತು ಖನಿಜಗಳಂತಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. 'ಡ್ರ್ಯಾಗನ್ ಫ್ರೂಟ್' ಸೂಪರ್ ಹಣ್ಣುಗಳಲ್ಲಿ ಒಂದಾಗಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

2 / 5

ಡ್ರ್ಯಾಗನ್ ಫ್ರೂಟ್​ನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಡಲಾಡಿಸುತ್ತದೆ. ಅಲ್ಲದೆ, ಇದು ಸಕ್ಕರೆ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

3 / 5

ಡ್ರ್ಯಾಗನ್ ಫ್ರೂಟ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಖನಿಜಗಳು ಮತ್ತು ಫೈಬರ್​ನ್ನು ಹೊಂದಿರುತ್ತದೆ. ಕಬ್ಬಿಣ, ಪ್ರೋಟೀನ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಮುಂತಾದ ಅಮೂಲ್ಯ ಪೋಷಕಾಂಶಗಳು ಸಹ ಹೊಂದಿದೆ.

4 / 5

ತೂಕ ಇಳಿಸಿಕೊಳ್ಳಲು ಬಯಸುವವರು ಡ್ರ್ಯಾಗನ್ ಫ್ರೂಟ್​ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

5 / 5

ಈ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ವಿವಿಧ ರೀತಿಯ ರೋಗಗಳಿಂದ ರಕ್ಷಿಸುತ್ತದೆ.

TV9 Web

TV9 Kannada

Read More
Loading...
Unable to load recommendations.
Follow Us