
ಉಷ್ಣ ವಲಯದಲ್ಲಿ ಮಾತ್ರ ಬೆಳೆ ಆಗುವ ಖರ್ಜೂರ ಬೆಳೆಯನ್ನು ಬೆಳೆದು ರೈತ ಭರಪೂರ ಆದಾಯ ಗಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ರೈತ ಲಕ್ಷ್ಮಿನಾರಾಯಣ ನಾಲ್ಕು ಎಕರೆ ಪ್ರದೇಶದಲ್ಲಿ ಬರಿ ಅನ್ನೊ ಖರ್ಜೂರ ತಳಿಯನ್ನು ಬೆಳೆದಿದ್ದು, ಮೂರು ವರ್ಷದ ಬೆಳೆ ಆಗಿದೆ. ನಾಲ್ಕು ಎಕರೆಯಲ್ಲಿ 260 ಖರ್ಜೂರ ಗಿಡಗಳಿದ್ದು, ಅದರಲ್ಲಿ ಕೆಲವು ಗಿಡಗಳು ಸದ್ಯಕ್ಕೆ ಖರ್ಜೂರ ಹಣ್ಣು ಬಿಟ್ಟಿವೆ.

1 ಕೆ.ಜಿ ಖರ್ಜೂರ 200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆಯಲ್ಲಿ ಹಣ್ಣುಗಳ ವರ್ತಕ ಗಂಗಾಧರ್ ಸಹ 1 ಕೆ.ಜಿ ಖರ್ಜೂರವನ್ನು 200 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಖರ್ಜೂರದಲ್ಲಿ ಕಬ್ಬಿಣ, ಖನಿಜಗಳು, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ರಂಜಕ, ಪ್ರೋಟೀನ್, ಫೈಬರ್, ವಿಟಮಿನ್ ಬಿ 1, ಬಿ 2, ಬಿ 3, ಬಿ 5, ಎ 1 ಮತ್ತು ಸಿ ಮತ್ತು ಫ್ಲೋರಿನ್‌ಗಳು ಹೇರಳವಾಗಿವೆ.

ಖರ್ಜೂರದಲ್ಲಿ ಹೆಚ್ಚಿನ ಸಂಖ್ಯೆಯ ಆಂಟಿ-ಆಕ್ಸಿಡೆಂಟ್‌ಗಳಿರುವುದರಿಂದ ಇದು ಸೋಂಕಿನ ವಿರುದ್ಧ ಹೋರಾಡುವಲ್ಲಿ ದೇಹವನ್ನು ಬಲಪಡಿಸುತ್ತದೆ. ಇದು ದೇಹದಲ್ಲಿ ಕ್ಯಾನ್ಸರ್ನಂತ ರೋಗಗಳ ವಿರುದ್ಧ ಹೋರಾಡುತ್ತದೆ.

ಖರ್ಜೂರದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಹಾಗೂ ಮಲಬದ್ಧತೆಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.