- Kannada News Photo gallery football legend cristiano ronaldo generosity sends plane full of care items to earthquake victims in syria and turkey
Cristiano Ronaldo: ಹೃದಯವಂತ ರೊನಾಲ್ಡೊ; ಭೂಕಂಪ ಸಂತ್ರಸ್ತರಿಗೆ ವಿಮಾನದ ತುಂಬಾ ಅಗತ್ಯ ವಸ್ತುಗಳ ರವಾನೆ
Cristiano Ronaldo: ರೊನಾಲ್ಡೊ ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ವಿಮಾನದ ತುಂಬಾ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಪೋರ್ಚುಗಲ್ ನಿಂದ ಹೊರಟಿರುವ ಈ ವಿಮಾನದಲ್ಲಿ ಜನರಿಗೆ ನೆರವಾಗುವ ಅಗತ್ಯ ವಸ್ತುಗಳಿದ್ದು ನಿರಾಶ್ರಿತರಿಗೆ ನೆರವಾಗಲಿವೆ.
Updated on:Mar 06, 2023 | 1:09 PM

ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಆಟದಲ್ಲಿ ಎಷ್ಟು ಖ್ಯಾತರಾಗಿದ್ದಾರೋ, ಹಾಗೆಯೇ ಕಷ್ಟಕ್ಕೆ ನೆರವಾಗುವ ವಿಚಾರದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಯಾವುದೇ ದೇಶದ ಜನ ಸಂಕಷ್ಟಕ್ಕೆ ಸಿಲುಕಿದಾಗ ರೊನಾಲ್ಡೊ ಸಹಾಯ ಮಾಡಲು ಮುಂದೆ ಬರುತ್ತಾರೆ. ಈಗ ಅಂತಹದ್ದೆ ಕೆಲಸ ಮಾಡುವ ಮೂಲಕ ರೊನಾಲ್ಡೊ ವಿಶ್ವದ ಹೃದಯ ಗೆದ್ದಿದ್ದಾರೆ.

ಡೈಲಿ ಮೇಲ್ ಸುದ್ದಿ ಪ್ರಕಾರ, ರೊನಾಲ್ಡೊ ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ವಿಮಾನದ ತುಂಬಾ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಪೋರ್ಚುಗಲ್ ನಿಂದ ಹೊರಟಿರುವ ಈ ವಿಮಾನದಲ್ಲಿ ಜನರಿಗೆ ನೆರವಾಗುವ ಅಗತ್ಯ ವಸ್ತುಗಳಿದ್ದು ನಿರಾಶ್ರಿತರಿಗೆ ನೆರವಾಗಲಿವೆ.

ಈ ಅಗತ್ಯ ವಸ್ತುಗಳಲ್ಲಿ ಸಂತ್ರಸ್ತರಿಗೆ ಟೆಂಟ್‌ಗಳು, ಆಹಾರ ಪ್ಯಾಕೆಟ್‌ಗಳು, ದಿಂಬುಗಳು, ಹೊದಿಕೆಗಳು, ಹಾಸಿಗೆಗಳು, ಮಗುವಿನ ಆಹಾರ, ಹಾಲು ಸೇರಿದಂತೆ ವಿವಿಧ ವೈದ್ಯಕೀಯ ಸಾಮಗ್ರಿಗಳು ಸೇರಿವೆ. ಇವೆಲ್ಲವುಗಳ ಒಟ್ಟು ವೆಚ್ಚ ಸುಮಾರು ಮೂರು ಕೋಟಿ ರೂಪಾಯಿಗಳು ಎನ್ನಲಾಗಿದೆ.

ಫೆಬ್ರವರಿ 6 ರಂದು, ಸಿರಿಯಾ ಮತ್ತು ಟರ್ಕಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತು. ಇದರಿಂದ ಸಾವಿರಾರು ಜನರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು.

ಟರ್ಕಿಯ ಫುಟ್ಬಾಲ್ ಆಟಗಾರ ಮಾರಿಸ್ ಡೆಮಿರಾಲ್ ಅವರು ಕೆಲವು ದಿನಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹರಾಜು ಮಾಡಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದರು. ಈ ಹರಾಜಿನಿಂದ ಬಂದ ಹಣವನ್ನು ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ಸಹ ಬಳಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದರು.
Published On - 1:09 pm, Mon, 6 March 23
