Updated on:Mar 06, 2023 | 9:29 AM
ನಟಿ ತೇಜಸ್ವಿ ಪ್ರಕಾಶ್ ಅವರು ಸಖತ್ ಬೋಲ್ಡ್ ಲುಕ್ನಲ್ಲಿ ಗಮನ ಸೆಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು, ‘ನಾಗಿನ್ 6’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ತೇಜಸ್ವಿ ಪ್ರಕಾಶ್ ಅವರು ಸಖತ್ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಈ ಫೋಟೋಗೆ ವಿವಿಧ ರೀತಿಯ ಕಮೆಂಟ್ಗಳು ಬಂದಿವೆ.
ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ‘ಕಾಂತಾರ’ ಚಿತ್ರದ ‘ಕರ್ಮ..’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡನ್ನು ತೇಜಸ್ವಿ ಹಾಡಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಕನ್ನಡದಲ್ಲೇ ‘ಕರ್ಮ’ ಹಾಡನ್ನು ತೇಜಸ್ವಿ ಹಾಡಿ ಎಲ್ಲರ ಗಮನ ಸೆಳೆದರು. ಅವರ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
‘ಬಿಗ್ ಬಾಸ್ ಹಿಂದಿ ಸೀಸನ್ 15’ರ ವಿನ್ನರ್ ಆಗಿದ್ದರು ತೇಜಸ್ವಿ ಪ್ರಕಾಶ್. ಅವರು ಗೆದ್ದ ನಂತರದಲ್ಲಿ ಜನಪ್ರಿಯತೆ ಹೆಚ್ಚಿತು.
Published On - 9:11 am, Mon, 6 March 23