- Kannada News Photo gallery Formula E race 2023 Jean Eric Vergne seals victory at India first e prix race in hyderabad
ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು
Formula E-race: ಭಾರತದಲ್ಲಿ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಆಯೋಜನೆಯಾಗಿದ್ದ ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ರೇಸ್ನಲ್ಲಿ ಅನುಭವಿ ಡಿಎಸ್ ಪೆನ್ಸ್ಕೆ ರೇಸರ್ ಜೀನ್-ಎರಿಕ್ ವರ್ಗ್ನೆ ಗೆಲುವು ಸಾಧಿಸಿದ್ದಾರೆ.
Updated on:Feb 13, 2023 | 12:46 PM

ಭಾರತದಲ್ಲಿ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಆಯೋಜನೆಯಾಗಿದ್ದ ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ರೇಸ್ನಲ್ಲಿ ಅನುಭವಿ ಡಿಎಸ್ ಪೆನ್ಸ್ಕೆ ರೇಸರ್ ಜೀನ್-ಎರಿಕ್ ವರ್ಗ್ನೆ ಗೆಲುವು ಸಾಧಿಸಿದ್ದಾರೆ. ಫಾರ್ಮುಲಾ-ಇ ರೇಸ್ ವರ್ಲ್ಡ್ ಚಾಂಪಿಯನ್‌ಶಿಪ್ ವಿಜೇತ ಜೀನ್ ಎರಿಕ್, ದ್ವಿತೀಯ ಸ್ಥಾನ ಪಡೆದ ನಿಕ್ ಕ್ಯಾಸಿಡಿ ಹಾಗೂ ತೃತೀಯ ಸ್ಥಾನ ಪಡೆದ ಸೆಬಾಸ್ಟಿಯನ್ ಅವರಿಗೆ ಸಚಿವ ಕೆಟಿಆರ್ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಹುಮಾನ ವಿತರಿಸಿದರು.

ಎಲೆಕ್ಟ್ರಿಫೈಯಿಂಗ್ 33-ಲ್ಯಾಪ್ ರೇಸ್ ಗೆದ್ದ ಜಿನ್ ಎರಿಕ್ಗೆ ನಿಕ್ ಕ್ಯಾಸಿಡಿ ಕಠಿಣ ಸವಾಲನ್ನು ನೀಡಿದರಾದರೂ ಅವರಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಹೀಗಾಗಿ ಜಿನ್ ಎರಿಕ್ ಮೊದಲ ಸ್ಥಾನ ಪಡೆದರೆ, ನಿಕ್ ಕ್ಯಾಸಿಡಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಹಾಗೆಯೇ ಸೆಬಾಸ್ಟಿಯನ್ ಮೂರನೇ ಸ್ಥಾನ ಪಡೆದರು.

ಗೆಲುವಿನ ನಂತರ ಮಾತನಾಡಿದ ಜಿನ್ ಎರಿಕ್, ‘ ಈ ಗೆಲುವು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಅಂತಿಮ ಹಂತದವರೆಗೂ ಹೋರಾಟ ಬಿಟ್ಟುಕೊಡದ ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

ವಾಸ್ತವವಾಗಿ ಹೇಳಬೇಕೆಂದರೆ ಕಳೆದ ವರ್ಷ ನವೆಂಬರ್‌ನಲ್ಲಿಯೇ ಹೈದರಾಬಾದ್‌ನಲ್ಲಿ ಇ-ರೇಸ್ ನಡೆಯಲಿದೆ ಎಂಬ ಪ್ರಕಟಣೆ ಹೊರಡಿಸಲಾಗಿತ್ತು. ಹೀಗಾಗಿ ಸಿಕ್ಕ ಕಡಿಮೆ ಸಮಯದಲ್ಲಿ ಈ ರೇಸನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸಂಘಟಕರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

ಈ ಫಾರ್ಮುಲಾ ರೇಸಿಂಗ್ ಸ್ಪರ್ಧೆಗೆ ಸೆಲೆಬ್ರಿಟಿಗಳು ಹೊಸ ಸೊಬಗನ್ನು ತಂದರು. ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ರೇಸ್ ವೀಕ್ಷಿಸಿದರು.

ಟಾಲಿವುಡ್ ಹೀರೋಗಳಾದ ರಾಮ್ ಚರಣ್, ನಾಗಾರ್ಜುನ, ನಾಗ ಚೈತನ್ಯ, ಕೆಜಿಎಫ್ ಹೀರೋ ಯಶ್, ದುಲ್ಕರ್ ಸಲ್ಮಾನ್, ಅಖಿಲ್, ಸಿದ್ದು ಜೊನ್ನಲಗಡ್ಡ, ಚಿರಂಜೀವಿ ಪುತ್ರಿ ಸುಶ್ಮಿತಾ, ಮಹೇಶ್ ಬಾಬು ಪುತ್ರ ಗೌತಮ್ ರೇಸಿಂಗ್ ಸ್ಪರ್ಧೆಗಳನ್ನು ವೀಕ್ಷಿಸಿದರು.

ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಅನುರಾಗ್ ಠಾಕೂರ್, ಕರ್ನಾಟಕದ ಆರೋಗ್ಯ ಸಚಿವ ಸುಧಾಕರ್, ಸಚಿವ ಕೆಟಿಆರ್, ಎಪಿ ಸಚಿವ ಅಮರನಾಥ್, ಸಂಸದ ರಾಮಮೋಹನ್ ನಾಯ್ಡು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಆನಂದ್ ಮಹೀಂದ್ರಾ ಜೊತೆ ರಾಮಚರಣ್
Published On - 2:36 pm, Sun, 12 February 23
