ಕೋವಿಡ್ ಇದ್ದರೂ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಡುತ್ತಿರುವ ಕಲಾವಿದರು, ಮುದ್ದು ಗಣಪನ ವಿಗ್ರಹಗಳ ನೋಡಿ
Ganesha Chaturthi 2021: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ.