- Kannada News Photo gallery Geetha Shivarajkumar Submit Nomination In Shivamogga Kp Srikantha And R Chandru supports
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಕೆ; ಸಾಥ್ ಕೊಟ್ಟ ನಿರ್ಮಾಪಕರು
ಗೀತಾಗೆ ಪತಿ ಶಿವರಾಜ್ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.
Updated on: Apr 15, 2024 | 12:38 PM

ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಪರ ಕಣಕ್ಕೆ ಇಳಿದಿದ್ದಾರೆ. ಅವರು ಇಂದು (ಏಪ್ರಿಲ್ 15) ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಗೀತಾಗೆ ಪತಿ ಶಿವರಾಜ್ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಶ್ರೀಕಾಂತ್ ಹಾಗೂ ಆರ್ ಚಂದ್ರು ಅವರು ಶಿವರಾಜ್ಕುಮಾರ್ ಕುಟುಂಬದ ಜೊತೆ ಒಳ್ಳೆಯ ನಂಟು ಹೊಂದಿದ್ದಾರೆ. ಈ ಕಾರಣಕ್ಕೆ ಗೀತಾಗೆ ಅವರು ಬೆಂಬಲ ನೀಡಿದ್ದಾರೆ.

ಗೀತಾ ಶಿವರಾಜ್ಕುಮಾರ್ ಅವರು ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಯಡಿರೂಪ್ಪ ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಪಕ್ಷೇತರವಾಗಿ ಐಶ್ವರಪ್ಪ ನಿಂತಿದ್ದಾರೆ. ಪ್ರತಿ ಊರಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಗೀತಾ ಪರ ಶಿವರಾಜ್ಕುಮಾರ್ ಅವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮೊದಲು ಶಿವಮೊಗ್ಗದಿಂದ ಸ್ಪರ್ಧೆ ಮಾಡಿ ಅವರು ಸೋತಿದ್ದರು.



















