AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಕೋಟಿ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳು ವಶಕ್ಕೆ

ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹಾವೇರಿ ಹೊರವಲಯದ ಅಜ್ಜಯ್ಯಗುಡಿ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಇಲ್ಲಿವೆ ಫೋಟೋಗಳು

Rakesh Nayak Manchi
|

Updated on:Apr 18, 2023 | 11:08 PM

Share
Gold and silver ornaments worth Rs 6 crore seized for carrying undocumented in Haveri

ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಹಾವೇರಿ ಹೊರವಲಯದ ಅಜ್ಜಯ್ಯಗುಡಿ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ.

1 / 6
Gold and silver ornaments worth Rs 6 crore seized for carrying undocumented in Haveri

ಹುಬ್ಬಳ್ಳಿಯಿಂದ ಹಾವೇರಿ, ದಾವಣಗೆರೆ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿ ಆಭವರಣ ಹಾಗೂ ವಸ್ತುಗಳನ್ನು ಸಾಗಿಸಲಾಗುತ್ತಿತ್ತು.

2 / 6
Gold and silver ornaments worth Rs 6 crore seized for carrying undocumented in Haveri

ವಾಹನದಲ್ಲಿ ಸುಮಾರು 11 ಕೆಜೆಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನ ಸಾಗಿಸಲಾಗುತ್ತಿತ್ತು. ಇದರ ಒಟ್ಟು ಮೌಲ್ಯ 6 ಕೋಟಿ 90 ಲಕ್ಷ ರೂಪಾಯಿ ಆಗಿದೆ.

3 / 6
Gold and silver ornaments worth Rs 6 crore seized for carrying undocumented in Haveri

ವಾಹನ ಪರಿಶೀಲನೆ ಪತ್ತೆಯಾದ ಆಭರಣಗಳು ಮತ್ತು ಸಾಗಾಟ ಮಾಡಲು ಬಳಕೆ ಮಾಡಿದ್ದ ವಾಹನವನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ.

4 / 6
Gold and silver ornaments worth Rs 6 crore seized for carrying undocumented in Haveri

ಸಾಗಾಟಗಾರರಲ್ಲಿ ಆಭರಣಗಳ ಖರೀದಿಸಿ ಬಿಲ್​ಗಳು ಇವೆ. ಅದರೆ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನ ಪಡೆದಿಲ್ಲ. ಮಾತ್ರವಲ್ಲದೆ, ನಿಖರವಾಗಿ ಚಿನ್ನಾಭರಣಗಳನ್ನ ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನೋ ದಾಖಲೆ ಇಲ್ಲ.

5 / 6
Gold and silver ornaments worth Rs 6 crore seized for carrying undocumented in Haveri

ಸದ್ಯ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ಒಪ್ಪಿಸಲಾಗಿದೆ.

6 / 6

Published On - 11:08 pm, Tue, 18 April 23