Updated on:Feb 08, 2023 | 9:50 PM
ಕ್ಯಾನ್ಸರ್ನಿಂದ ದೂರವಿರಲು ಗ್ರೀನ್ ಟೀ ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅವರ ಪ್ರಕಾರ, ಹಾಲು, ಸಕ್ಕರೆ ಮತ್ತು ಚಹಾ ಎಲೆಗಳಿಂದ ಮಾಡಿದ ಚಹಾಕ್ಕಿಂತ ಹಸಿರು ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ.
ಈ ಹರ್ಬಲ್ ಟೀ ಕುಡಿಯುವುದರಿಂದ ತೂಕವನ್ನು ಸಹ ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಗ್ರೀನ್ ಟೀಗೆ ಪುದೀನ ಎಲೆಗಳು ಮತ್ತು ದಾಲ್ಚಿನ್ನಿಯನ್ನು ಬೆರೆಸಿ ಕುಡಿಯಬಹುದು. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲೊರಿ ಕಡಿಮೆ ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.
ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು. ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಇದು ಅದ್ಭುತಗಳನ್ನು ಮಾಡುತ್ತದೆ.
Published On - 9:49 pm, Wed, 8 February 23