AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಹಲವು ಹಿಟ್ ಸಿನಿಮಾ, ಕನ್ನಡ ಚಿತ್ರಗಳೆಷ್ಟು?

OTT release this week: ಕನ್ನಡದ ‘ಸು ಫ್ರಂ ಸೋ’ ಸಿನಿಮಾದ ಅಬ್ಬರ ಚಿತ್ರಮಂದಿರಗಳಲ್ಲಿ ನಿಧಾನಕ್ಕೆ ಕಡಿಮೆ ಆಗುತ್ತಿದೆ. ಕಳೆದ ವಾರ ಬಿಡುಗಡೆ ಆದ ‘ಕೂಲಿ’ ಮತ್ತು ‘ವಾರ್ 2’ ದೊಡ್ಡ ಮ್ಯಾಜಿಕ್ ಸೃಷ್ಟಿಸಲು ವಿಫಲವಾಗಿವೆ. ಈ ಶುಕ್ರವಾರ ಹೇಳಿಕೊಳ್ಳುವಂಥಹಾ ಸಿನಿಮಾಗಳೇನೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿಲ್ಲ. ಆದರೆ ಒಟಿಟಿಯಲ್ಲಿ ಪ್ರತಿ ವಾರದಂತೆ ಈ ವಾರವೂ ಸಹ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿದ್ದು, ಪಟ್ಟಿ ಇಲ್ಲಿದೆ...

ಮಂಜುನಾಥ ಸಿ.
|

Updated on: Aug 23, 2025 | 6:10 PM

Share
ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸಿ ನಾಗಶೇಖರ್ ನಿರ್ದೇಶನ ಮಾಡಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಎರಡೆರಡು ಬಾರಿ ಬಿಡುಗಡೆ ಆಯ್ತು. ಆದರೂ ಫ್ಲಾಪ್ ಆಯ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

1 / 7
ಕನ್ನಡದಲ್ಲಿ ವೆಬ್ ಸರಣಿಗಳು ಬರುವುದು ಕಡಿಮೆ ಎಂಬ ದೂರು ಇರುವಾಗಲೇ ‘ಅಯ್ಯನ ಮನೆ’ ವೆಬ್ ಸರಣಿ ಬಿಡುಗಡೆ ಆಗಿ ಹಿಟ್ ಆಯ್ತು. ಇದೀಗ ಲೂಸಿಯಾ ಪವನ್ ನಟಿಸಿರುವ ‘ಶೋಧ’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಇದು ಸಹ ಜೀ5ನಲ್ಲಿ ಲಭ್ಯವಿದೆ.

2 / 7
ಖ್ಯಾತ ನಟ ಫಹಾದ್ ಫಾಸಿಲ್ ಮತ್ತು ತಮಿಳಿನ ಲಿಜೆಂಡರಿ ಹಾಸ್ಯನಟ ವಡಿವೇಲು ಒಟ್ಟಿಗೆ ನಟಿಸಿರುವ ಥ್ರಿಲ್ಲರ್ ಮತ್ತು ಡ್ರಾಮಾ ಅಂಶಗಳನ್ನು ಒಳಗೊಂಡಿರುವ ಸಿನಿಮಾ ‘ಮಾರೀಸನ್’ ಈ ವಾರ ಒಟಿಟಿಗೆ ಬಂದಿದೆ. ಒಬ್ಬ ಕಳ್ಳ ಮತ್ತು ಒಬ್ಬ ಮರೆವಿನ ಕಾಯಿಲೆಯುಳ್ಳ ವ್ಯಕ್ತಿಯ ನಡುವೆ ನಡೆವ ಕತೆಯಿದು. ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಲಭ್ಯವಿದೆ.

3 / 7
ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಮತ್ತು ಆಕ್ಷನ್ ಅನ್ನೂ ಒಳಗೊಂಡಿರುವ ‘ತಲೈವನ್-ತಲೈವಿ’ ಸಿನಿಮಾ ಕೆಲ ದಿನಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

4 / 7
ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ಬ್ರಾಡ್ ಪಿಟ್ ನಟನೆಯ ‘ಎಫ್​1’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಭಾರತದಲ್ಲೂ ಬ್ಲಾಕ್ ಬಸ್ಟರ್ ಆದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಾಡಿಗೆ ವಿಧಾನದಲ್ಲಿ ವೀಕ್ಷಣೆಗೆ ಲಭ್ಯವಿದೆ.

5 / 7
ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್​ಬಾಸ್ ಹಿಂದಿ ಸೀಸನ್ 19 ಇದೇ ವಾರ ಆರಂಭವಾಗಲಿದ್ದು, ಟಿವಿಯ ಜೊತೆಗೆ ಜಿಯೋ ಹಾಟ್​ಸ್ಟಾರ್​​ನಲ್ಲಿಯೂ ಪ್ರಸಾರ ಆಗಲಿದೆ. ಆಗಸ್ಟ್ 24 ರಿಂದ ಬಿಗ್​ಬಾಸ್ ಹಿಂದಿ ಪ್ರಸಾರ ಆರಂಭವಾಗಲಿದೆ.

6 / 7
ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಹಾರರ್ ಥ್ರಿಲ್ಲರ್ ಸಿನಿಮಾ ‘ಮಾ’ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತ್ತು. ಈ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ತೆರೆಗೆ ಬಂದಿದೆ.

7 / 7
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ

ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'

ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು

ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ