ಶೋಭಿತಾ-ನಾಗ ಚೈತನ್ಯ ಹಳದಿ ಶಾಸ್ತ್ರ: ಇಲ್ಲಿವೆ ಸುಂದರ ಚಿತ್ರಗಳು
Naga Chaitanya: ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು ವಿವಾಹವಾಗುತ್ತಿದ್ದಾರೆ. ಇಬ್ಬರ ಮದುವೆ ಶಾಸ್ತ್ರ ಇಂದು ಪ್ರಾರಂಭ ಆಗಿದೆ. ಹಳದಿ ಶಾಸ್ತ್ರ ನೆರವೇರಿದ್ದು ಇಲ್ಲಿವೆ ಕೆಲವು ಸುಂದರ ಚಿತ್ರಗಳು.
Updated on: Nov 29, 2024 | 3:44 PM

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ವಿವಾಹವಾಗುತ್ತಿದ್ದಾರೆ. ವಿವಾಹ ಶಾಸ್ತ್ರಗಳು ಇಂದಿನಿಂದ (ನವೆಂಬರ್ 29) ಪ್ರಾರಂಭ ಆಗಿವೆ. ಕುಟುಂಬ ಸದಸ್ಯರು ಮಾತ್ರವೇ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ನಾಗ ಚೈತನ್ಯ ಈ ಹಿಂದೆ ಸಮಂತಾ ಜೊತೆ ವಿವಾಹವಾಗಿದ್ದರು. ಅವರೊಟ್ಟಿಗೆ ವಿಚ್ಛೇದನ ಪಡೆದು ಈಗ ಶೋಭಿತಾ ಅವರನ್ನು ಮದುವೆ ಆಗುತ್ತಿದ್ದಾರೆ. ಶೋಭಿತಾಗೆ ಇದು ಮೊದಲ ಮದುವೆ.

ಹೈದರಾಬಾದ್ನ ವಿಶೇಷ ಸ್ಥಳದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಮದುವೆ ನಡೆಯುತ್ತಿದ್ದು, ನಾಗ ಚೈತನ್ಯ ಹಾಗೂ ಶೋಭಿತಾ ಅವರನ್ನು ಒಟ್ಟಿಗೆ ಕೂರಿಸಿ ಹಳದಿ ಶಾಸ್ತ್ರ ಮಾಡಲಾಗಿದೆ.

ಶೋಭಿತಾ ಹಾಗೂ ನಾಗ ಚೈತನ್ಯ ಅವರುಗಳಿಗೆ ಹಳದಿ ಹಚ್ಚಿ ಮಂಗಳ ಸ್ನಾನ ಮಾಡಿಸಲಾಗಿದೆ. ನವಜೋಡಿಯನ್ನು ಒಟ್ಟಿಗೆ ಕೂರಿಸಿ ಹೂವು ಹಾಕಿ ಆಶೀರ್ವದಿಸಲಾಗಿದೆ. ನವಜೋಡಿಯ ಚಿತ್ರಗಳು ಈಗ ವೈರಲ್ ಆಗುತ್ತಿವೆ.

ಶೋಭಿತಾ ಧುಲಿಪಾಲ ಹಾಗೂ ನಾಗ ಚೈತನ್ಯ ಅವರ ವಿವಾಹವು ಡಿಸೆಂಬರ್ 05 ರಂದು ನಡೆಯಲಿದೆ. ಆ ವರೆಗೆ ಮದುವೆಯ ವಿವಿಧ ಶಾಸ್ತ್ರಗಳನ್ನು ಎರಡೂ ಕಡೆಯ ಕುಟುಂಬದವರು ಸೇರಿ ನೆರವೇರಿಸಲಿದ್ದಾರೆ.




