ಕರ್ನಾಟಕದಲ್ಲಿ ಗಣೇಶ ಅಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಂದರವಾದ ಸೆಟ್ಗಳನ್ನು ಹಾಕಿ ಗಣೇಶನನ್ನು ಕೂಡಿಸಲಾಗಿದೆ. ಕರ್ನಾಟಕ ಗಡಿಭಾಗ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ಹೊಸೂರಿನ ಶ್ರೀನಗರದಲ್ಲಿ ಹೈಕೋರ್ಟ್ ಮಾದರಿಯ ಸೆಟ್ ಹಾಕಲಾಗಿದೆ. ಹೈಕೋರ್ಟ್ ಆವರಣದಲ್ಲಿ ಮಹಾತ್ಮ ಗಾಂಧಿ ಮೂರ್ತಿಯನ್ನು ನಿಲ್ಲಿಸಲಾಗಿದೆ. ಮತ್ತು ಪ್ಲೇವುಡ್ನಿಂದ ತಯಾರಿಸಿದ ಪೊಲೀಸ್ ಜೀಪ್ನನ್ನು ಪಾರ್ಕ್ ಮಾಡಲಾಗಿದೆ.
ಹೈಕೋರ್ಟ್ನಲ್ಲಿ ಜಡ್ಜ್, ಗುಮಾಸ್ತ, ಕ್ಲರ್ಕ್, ವಕೀಲರು, ಪೋಲೀಸರು ಎಲ್ಲವೂ ಗಣಪನೇ ಆಗಿದ್ದಾರೆ. ಹೈಕೋರ್ಟ್ ಕಟಕಟೆಯಲ್ಲಿ ಆರೋಪಿಯಾಗಿ ಇಲಿಯನ್ನ ನಿಲ್ಲಿಸಲಾಗಿದೆ. ಶ್ರೀನಗರ ಯುವಕರ ತಂಡ ಒಟ್ಟು 16ಕ್ಕೂ ಹೆಚ್ಚು ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದೆ.
ಬರೊಬ್ಬರಿ ಏಳು ಲಕ್ಷ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಲಾಗಿದೆ. ಜಿಗಣಿಯ ಉದಯ್ ಕುಮಾರ್ ತಂಡದಿಂದ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಿದೆ. ಇಪ್ಪತ್ತೈದು ದಿನದಲ್ಲಿ ಹೈಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೇ ಶ್ರೀನಗರದಲ್ಲಿ ಕಳೆದ ವರ್ಷ ಪೊಲೀಸ್ ಠಾಣೆ ಸೆಟ್ ಹಾಕಲಾಗಿತ್ತು.
ಹೈಕೋರ್ಟ್ ಮಾದರಿ ಸೆಟ್ ಅನ್ನು ನೋಡಲು ಹೊಸೂರು, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಜನರು ಬರುತ್ತಿದ್ದಾರೆ. ಸೆಟ್ ನಿರ್ಮಾಣ ಮಾಡಿದ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Published On - 11:41 am, Mon, 9 September 24