AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನ ಈ ಹೈಟೆಕ್ ಚಿತಾಗಾರಕ್ಕೆ ತುರ್ತಾಗಿ ಬೇಕಿದೆ ವಿದ್ಯುತ್ ಗ್ಯಾರಂಟಿ, ನಾಲ್ಕು ವರ್ಷದಿಂದ ಇಲ್ಲಿಗೆ ಕರೆಂಟ್​​ ಬಿಟ್ಟಿಲ್ಲ!

ಅದು ರಾಜ್ಯದ ಪ್ರತಿಷ್ಠಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಹೊಂದಿರುವ ಜಿಲ್ಲಾ ಕೇಂದ್ರ. ಜಿಲ್ಲಾ ಕೇಂದ್ರವಾದ ಆ ರಾಯಚೂರಿನಲ್ಲಿ ಹೈಟೆಕ್ ಚಿತಾಗಾರವೊಂದು ಸ್ಥಾಪನೆಗೊಂಡು ನಾಲ್ಕು ವರ್ಷ ಕಳೆದಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಆ ಚಿತಾಗಾರಕ್ಕೆ ಇದುವರೆಗೂ ವಿದ್ಯುತ್ತೇ ಹರಿದಿಲ್ಲ. ನಾಲ್ಕು ವರ್ಷದಿಂದ ಇಲ್ಲಿಗೆ ಕರೆಂಟ್​​ ಬಿಟ್ಟಿಲ್ಲ! ನಾಲ್ಕು ವರ್ಷದವಾದ್ರೂ ಉದ್ಘಾಟನೆಗೊಳ್ಳದೆ ಈ ವಿದ್ಯುತ್ ಹೈಟೆಕ್ ಚಿತಾಗಾರವೇ ಶವಪೆಟ್ಟಿಗೆ ಸೇರಿದೆ.

ಭೀಮೇಶ್​​ ಪೂಜಾರ್
| Edited By: |

Updated on:Jun 20, 2023 | 2:00 PM

Share
ಅದು ರಾಜ್ಯದ ಪ್ರತಿಷ್ಠಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಹೊಂದಿರುವ ಜಿಲ್ಲಾ ಕೇಂದ್ರ. ಜಿಲ್ಲಾ ಕೇಂದ್ರವಾದ ಆ ರಾಯಚೂರಿನಲ್ಲಿ ಹೈಟೆಕ್ ಚಿತಾಗಾರವೊಂದು ಸ್ಥಾಪನೆಗೊಂಡು ನಾಲ್ಕು ವರ್ಷ ಕಳೆದಿದೆ.

1 / 8
ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಆ ಚಿತಾಗಾರಕ್ಕೆ ಇದುವರೆಗೂ ವಿದ್ಯುತ್ತೇ ಹರಿದಿಲ್ಲ. ನಾಲ್ಕು ವರ್ಷದಿಂದ ಇಲ್ಲಿಗೆ ಕರೆಂಟ್​​ ಬಿಟ್ಟಿಲ್ಲ! ನಾಲ್ಕು ವರ್ಷದವಾದ್ರೂ ಉದ್ಘಾಟನೆಗೊಳ್ಳದೆ ಈ ವಿದ್ಯುತ್ ಹೈಟೆಕ್ ಚಿತಾಗಾರವೇ ಶವಪೆಟ್ಟಿಗೆ ಸೇರಿದೆ.

2 / 8
ಚಿತಾಗಾರ ನಿರ್ಮಾಣ ಮಾಡಿ 3-4 ವರ್ಷ ಕಳೆದರೂ ಬಳಕೆಯಾಗದೇ ಅವ್ಯವಸ್ಥೆಯ ಆಗರವಾಗಿದೆ. ಉದ್ಘಾಟನೆಯಾಗದ ಚಿತಾಗಾರಕ್ಕೆ ಕಳೆದ ನಾಲ್ಕು ವರ್ಷದಿಂದ ಕನಿಷ್ಠ ವಿದ್ಯುತ್ ಬಿಲ್ 8 ಲಕ್ಷ ರೂಪಾಯಿ ಆಗಿದೆ.

3 / 8
ರಾಯಚೂರು ನಗರದ ಬಿಆರ್ ಬಿ ಸರ್ಕಲ್ ಬಳಿಯಿರುವ ಈ ಸರ್ಕಾರಿ ಚಿತಾಗಾರ ಅಂದಿಗೆ ಸುಮಾರು‌ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು.

4 / 8
ಉದ್ಘಾಟನೆಯೇ ಆಗದ ಈ ಚಿತಾಗಾರಕ್ಕೆ ಕಳೆದ ನಾಲ್ಕು ವರ್ಷದ ಲೆಕ್ಕದಲ್ಲಿ ಮಿನಿಮಮ್ ವಿದ್ಯುತ್ ಬಿಲ್ 8 ಲಕ್ಷ ರೂಪಾಯಿಗೆ ಬಂದಿದೆ. ಈ ದುಬಾರಿ ವಿದ್ಯುತ್ ಬಿಲ್ ನೋಡಿಯಾದರೂ ಶಾಕ್ ಹೊಡೆದು ಇದರ ನಿರ್ವಹಣೆ ಮಾಡುತ್ತಿರುವ ನಗರಸಭೆ ಎಚ್ಚೆತ್ತುಕೊಳ್ಳುತ್ತದಾ ಅಂದ್ರೆ, ಅದರ ಸಣ್ಣ ಸುಳಿವೂ ನಗರಸಭೆ ಅಧಿಕಾರಿಗಳಲ್ಲಿ ಕಂಡುಬಂದಿಲ್ಲ.

5 / 8
ಸುಮಾರು‌ 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ರಾಯಚೂರು ನಗರದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಸ್ಮಶಾನ ಇದಾಗಿದೆ. ಇನ್ನು ಚಿತಾಗಾರದಲ್ಲಿರುವ ಕೋಟ್ಯಂತರ ರೂ ಮೌಲ್ಯದ ಯಂತ್ರೋಪಕರಣಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ.

6 / 8
ಒಟ್ಟಾರೆ ನಗರಸಭೆ ಮತ್ತು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದಾಗಿ ಕೋಟ್ಯಾಂತರ ರೂಪಾಯಿ  ಪೋಲು ಆಗಿದೆ. ಪ್ರಾಯೋಗಿಕವಾಗಿ ಒಂದು ಮೃತದೇಹವನ್ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಅದಾದಮೇಲೆ ‘ಪ್ರಾಯೋಗಿಕವಾಗಿ ಸಕ್ಸಸ್’ ಅಂತ ಉಲ್ಲೇಖಿಸಿ, ಹಣ ದುರ್ಬಳಕೆ ಮಾಡಿರುವ ಆರೋಪವೂ ಇದೆ.

7 / 8
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಎನ್​ ಎಸ್​ ಭೋಸ್​ ರಾಜು ಅವರು ಚಿತಾಗಾರಕ್ಕೆ ತಕ್ಷಣ ಜೀವ  ತುಂಬಲು ಜಿಲ್ಲಾ ಅಧಿಕಾರಿಗಳಿಗೆ ಖಡಕ್​ ಆದೇಶ ನೀಡಿದ್ದಾರೆ. ನಾಲ್ಕು ವರ್ಷಗಳ ಕಾಲ ಚಿತಾಗಾರ ಉಪಯೋಗಿಸದೇ ಇದ್ರೂ ಎಂಟು ಲಕ್ಷ ಮಿನಿಮಮ್ ವಿದ್ಯುತ್ ಬಿಲ್ ಬಂದಿರೊ ವಿಚಾರಕ್ಕೆ ಸಚಿವ ಎನ್ ಎಸ್ ಬೋಸರಾಜ್ ಕಿಡಿಕಾರಿದ್ದಾರೆ. ಉಪಯೋಗಿಸದೇ ಇದ್ರೆ 8 ಲಕ್ಷ ಯಾಕೆ 25 ಲಕ್ಷ ರೂಪಾಯಿ ಆಗುತ್ತೆ. ಅದಕ್ಕೆ ಬೇಕಿರೋದು ಒಂದು ಜನರೇಟರ್. ನೋಡ್ರಿ ಅದು ಫಂಕ್ಷನಿಂಗ್ ಆಗಬೇಕು. ಒಂದು ಗೈಡ್ ಲೈನ್ಸ್ ಹಾಕಿ ಕೊಟ್ರೆ ಯಾವದೋ ಆರ್ಗನೈಸೇಷನ್ ಗೆ ಕೊಡ್ತೀವಿ. ಅವ್ರು ಮೆಂಟೈನ್ ಮಾಡ್ತಾರೆ. ಕೂಡಲೇ ಸಮಸ್ಯೆ ಪರಿಹರಿಸಿ ಅಂತ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

8 / 8

Published On - 1:55 pm, Tue, 20 June 23