AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರುವೆಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತವೆ? ಇಲ್ಲಿದೆ ಮಾಹಿತಿ

ಮನೆಯಲ್ಲಿ ಸಿಹಿತಿಂಡಿ ಏನಾದರೂ ಇದ್ದರೆ ಕಣ್ಣು ಮುಚ್ಚಿ ಬಿಡುವುದರೊಳಗಾಗಿ ಇರುವೆಗಳ ರಾಶಿಯೇ ತುಂಬಿರುತ್ತದೆ. ಸಾಮಾನ್ಯವಾಗಿ ಒಂದು ಕಡೆ ನಿಂತುಕೊಳ್ಳದೇ ಓಡಾಡುವ ಇರುವೆಗಳನ್ನು ನೋಡಿರುತ್ತೀರಿ. ಸಾಲುಗಟ್ಟಿ ಅತ್ತಿಂದ ಇತ್ತ ಓಡಾಡುವ ಇರುವೆಗಳು ಕೂಡ ವಿಶ್ರಾಂತಿ ಪಡೆದುಕೊಳ್ಳುತ್ತವೆ ಎನ್ನುವುದು ತಿಳಿದರೆ ಅಚ್ಚರಿಯೆನಿಸಬಹುದು. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Apr 28, 2025 | 5:35 PM

Share
ಇರುವೆಗಳನ್ನು ಯಾರು ನೋಡಿರಲ್ಲ ಹೇಳಿ, ಕೆಂಪು, ಕಪ್ಪು ಹೀಗೆ ಬಗೆ ಬಗೆಯ ಜಾತಿಯ ಇರುವೆಗಳಿವೆ. ಮನೆಯಲ್ಲಿ ಸಿಹಿತಿಂಡಿ ತಿನಿಸುಗಳನ್ನು ಎಲ್ಲಿಯೇ ಅಡಗಿಸಿಟ್ಟರೂ ಕೂಡ ಈ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವೇ ಇಲ್ಲ. ಯಾವ ಮೂಲೆಯಲ್ಲಿ ಇಟ್ಟರೂ ಸಿಹಿ ತಿಂಡಿಗೆ ಇರುವೆಗಳು ಮುತ್ತಿಕೊಳ್ಳುತ್ತವೆ.

1 / 6
ತುಂಬಾ ಚುರುಕಿನ ಜೀವಿಯಾಗಿರುವ ಇರುವೆ  ಶಿಸ್ತಿಗೆ ಮತ್ತೊಂದು ಹೆಸರೇ ಇವುಗಳು ಎನ್ನಬಹುದು. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳು ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುವ ರೀತಿಯನ್ನೇ ನೋಡಿದರೂ ಎಷ್ಟು ಬುದ್ಧಿವಂತ ಜೀವಿಗಳು ಎನಿಸುತ್ತದೆ. ಆದರೆ ಈ ಇರುವೆಗಳು ಕೂಡ ವಿಶ್ರಾಂತಿ ಪಡೆಯುತ್ತವೆಯಂತೆ.

2 / 6
ಶ್ರಮ ಜೀವಿಗಳಾದ ಈ ಇರುವೆಗಳು ಕಷ್ಟಪಟ್ಟು ಆಹಾರ ಸಂಗ್ರಹಿಸುತ್ತದೆ. ಅಷ್ಟೇ ಅಲ್ಲದೇ ಈ ಇರುವೆಗಳು ದಿನ ಎಷ್ಟು ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತವೆ ಹಾಗೂ ನಿದ್ರಿಸುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

3 / 6
ಹೌದು, ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಪ್ರತಿ 12 ಗಂಟೆಗಳಿಗೊಮ್ಮೆ ಸರಾಸರಿ 8 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತವೆಯಂತೆ. ಒಂದೇ ಬಾರಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳುವುದಿಲ್ಲ. ಸ್ವಲ್ಪ ಸಮಯ ಆಹಾರ ಸಂಗ್ರಹಿಸಿ ತನ್ನ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ಕೆಲವೇ ಕೆಲವು ನಿಮಿಷ ವಿಶ್ರಾಂತಿ ಪಡೆದು ಮತ್ತೆ ತನ್ನ ಕೆಲಸದಲ್ಲಿ ನಿರತವಾಗುತ್ತವೆ.

4 / 6
ರಾಣಿ ಇರುವೆಗಳ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಈ ಇರುವೆಗಳು ವಿಶ್ರಾಂತಿ ತೆಗೆದುಕೊಳ್ಳುವುದು ಹಾಗೂ ನಿದ್ರಿಸುವ ಸಮಯವು ತುಂಬಾನೇ ಕಡಿಮೆ ಎನ್ನಬಹುದು. ದಿನದಲ್ಲಿ ಕೇವಲ 92 ಬಾರಿ ಮಾತ್ರ ನಿದ್ರಿಸುವ ಮೂಲಕ ವಿಶ್ರಾಂತಿ ಪಡೆದುಕೊಳ್ಳುತ್ತವೆ.

5 / 6
ಪ್ರತಿ ಸಲವೂ ಆರು ನಿಮಿಷಗಳಷ್ಟೇ ನಿದ್ರೆಗಾಗಿ ಸಮಯವನ್ನು ಮೀಸಲಿಡುತ್ತದೆ. ದಿನದಲ್ಲಿ ಒಂಭತ್ತೂವರೆ ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ. ಅದಲ್ಲದೇ, ಈ ಕೆಲಸಗಾರ ಇರುವೆಗಳು ಶಿಫ್ಟ್ ಪ್ರಕಾರವಾಗಿ ಕೆಲಸವನ್ನು ಮಾಡಿ ಮುಗಿಸುತ್ತವೆಯಂತೆ. ಈ ಕೆಲಸಗಾರ ಇರುವೆಗಳು ದಿನಕ್ಕೆ 253 ಬಾರಿ ನಿದ್ರಿಸುತ್ತವೆ.

6 / 6
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್

ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ

ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ

ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!

ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ

ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ

ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ

ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ

ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ