AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: 20 ವರ್ಷದ ಬಳಿಕ ಅದ್ದೂರಿ ದ್ಯಾಮಮ್ಮದೇವಿ ಜಾತ್ರೆ; ಬಂಡಾರದಲ್ಲಿ ಮಿಂದೆದ್ದ ಭಕ್ತ ಗಣ, ಇಲ್ಲಿದೆ ಝಲಕ್​

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಟಿತ ಓಣಿ. ಅಲ್ಲಿ ಕಳೆದ ಕೆಲ ದಿನಗಂದ ಭರ್ಜರಿ ಹೋಳಿ ಆಚರಣೆ ಮಾಡಲಾಗಿದ್ದು. ಬಣ್ಣದಲ್ಲಿ ಮಿಂದೆದ್ದ ಅಲ್ಲಿನ ಜನ ಇಂದು (ಮಾ.21)ಬಂಡಾರದಲ್ಲಿ ಮಿಂದಿದ್ದೆದಿದ್ದಾರೆ‌‌. ಸುಮಾರು 20 ವರ್ಷದ ಬಳಿಕ ದ್ಯಾಮಮ್ಮದೇವಿ ಜಾತ್ರೆ ಮಾಡಿದ್ದು ಎಲ್ಲಿ ನೋಡಿದರಲ್ಲಿ ಬಂಡಾರವೇ ಕಾಣುತ್ತಿತ್ತು. ಎಲ್ಲಿ ಅಂತೀರಾ ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on:Mar 22, 2023 | 3:16 PM

Share
ಒಂದು ಕಡೆ ಕಣ್ಣು ಹಾಯಿಸದಲ್ಲೆಲ್ಲಾ ಬಂಡಾರ‌, ಬಂಡಾರದಲ್ಲಿ‌ ಮಿಂದೆದ್ದ ಭಕ್ತ ಸಾಗರ‌. ಇನ್ನೊಂದು ಕಡೆ ಭಕ್ತರ ಹರ್ಷೋದ್ಗಾರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಯಲ್ಲಾಪೂರ ಓಣಿಯಲ್ಲಿ. ಹೌದು ಹುಬ್ಬಳ್ಳಿಯ ಪ್ರಮುಖ ಓಣಿ. ಇಲ್ಲಿ ರಂಗಪಂಚಮಿ ನಿಮಿತ್ಯ ಭರ್ಜರಿಯಾಗಿ ಬಣ್ಣದೋಕಳಿ ಆಡಲಾಗುತ್ತೆ.ಇಂದು(ಮಾ.21)ಇದೇ ಯಲ್ಲಾಪೂರ ಓಣಿಯಲ್ಲಿ ಎಲ್ಲಿ ನೋಡಿದರೂ ಬಂಡಾರ. ಗುರುತು ಸಿಗದಷ್ಟು ಬಂಡಾರದಲ್ಲಿ ಮಿಂದೆದ್ದರು‌. ಇದಕ್ಕೆಲ್ಲ ಕಾರಣ ಯಲ್ಲಾಪೂರ ಓಣಿಯ ದ್ಯಾಮಮ್ಮ ದೇವಿ ಜಾತ್ರೆ.

1 / 7
ಹೌದು ಕಳೆದ 20 ವರ್ಷಗಳಿಂದ ದ್ಯಾಮಮ್ಮದೇವಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಿರಲಿಲ್ಲ. ಸಾಂಕೇತಿಕವಾಗಿ ಜಾತ್ರೆಯನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ದ್ಯಾಮಮ್ಮ ದೇವಿ ಜಾತ್ರೆಯನ್ನು ಓಣಿಯ ಹಿರಿಯರೆಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

2 / 7
ಅದೂ ಬಂಡಾರದ ಜಾತ್ರೆ ಮಾಡೋದರ ಮೂಲಕ ದ್ಯಾಮಮ್ಮನ ಹರಕೆ ತೀರಿಸಿದ್ದಾರೆ. ಯಲ್ಲಾಪೂರ ಓಣಿ, ಸಿದ್ದಿಪೇಟೆ ಮಾರ್ಗವಾಗಿ ಬಂಡಾರದ ಜಾತ್ರೆ ಅದ್ದೂರಿಯಾಗಿ ಸಾಗಿತ್ತು. 20 ವರ್ಷಗಳ ಬಳಿಕ ನಡೆದ ಜಾತ್ರೆಯಲ್ಲಿ ಸುಮಾರು 4 ರಿಂದ ಐದು ಸಾವಿರ ಭಕ್ತರು ಭಾಗಿಯಾಗಿದ್ದರು.

3 / 7
ಇನ್ನು ದ್ಯಾಮಮ್ಮದೇವಿ ಅದ್ದೂರಿ ಜಾತ್ರೆ ಹಿನ್ನಲೆ ಯಲ್ಲಾಪೂರ ಓಣಿಯಲ್ಲಿ ಬಹಳ ಕಟ್ಟು ನಿಟ್ಟಿನ ಕ್ರಮ ಆಚರಣೆ ಮಾಡಲಾಗುತ್ತೆ. ಒಂದು ತಿಂಗಳ ಕಾಲ ಮನೆಯಲ್ಲಿ ಯಾರೂ ಹಂಚು ಇಡೋದಿಲ್ಲ. ಅಲ್ಲದೇ ಇವತ್ತು ಯಾರೂ ಚಪ್ಪಲಿ ಧರಿಸೋದಿಲ್ಲ.

4 / 7
 ಹೌದು ಇಂದು ದೇವಸ್ಥಾನದ ಬಳಿ ಚಪ್ಪಲಿ ಧರಿಸಿಕೊಂಡು ಬರುವ ಹಾಗಿಲ್ಲ. ಅಷ್ಟು ಕಟ್ಟು ನಿಟ್ಟಾಗಿ ದ್ಯಾಮಮ್ಮ ದೇವಿ ಜಾತ್ರೆಯನ್ನ ಆಚರಣೆ ಮಾಡಲಾಗತ್ತೆ. ಇನ್ನು ಈ ವರ್ಷ ದ್ಯಾಮಮ್ಮ ದೇವಿ ಮೂರ್ತಿಗೆ ಬಣ್ಣ ಕೂಡ ಮಾಡಿಸಲಾಗಿದೆ.

5 / 7
ಒಟ್ಟಾರೆ ಯಲ್ಲಾಪೂರ ಓಣಿಯಲ್ಲಿ ಇಂದು ಎಲ್ಲಿ ನೋಡಿದರೂ ಬಂಡಾರ. ಭಕ್ತ ಗಣ ಬಂಡಾರದಲ್ಲಿ ಮಿಂದೆದ್ದು ದೇವಿ ಹರಕೆ ತೀರಿಸಿದ್ರು. ಕಳೆದ ಒಂದು ತಿಂಗಳಿಂದ ಕಟ್ಟು ನಿಟ್ಟಿನ ನಿಯಮ ಪಾಲಿಸುವ ಯಲ್ಲಾಪೂರ ಓಣಿಯ ಜನ ಇಂದು ಬಂಡಾರದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು.

6 / 7
ಪ್ರತಿ ವರ್ಷ ಸಾಂಕೇತಿಕವಾಗಿ ನಡೆಯುತ್ತಿದ್ದ ಜಾತ್ರೆ ಈ ಬಾರಿ ಅದ್ದೂರಿಯಾಗಿ ನಡೆಯಿತು.ಕಟ್ಟು ನಿಟ್ಟಿನ ನಿಯಮ‌ ಪಾಲಿಸಿ ಭಕ್ತರು ಬಂಡಾರದಲ್ಲಿ ಮಿಂದೆದ್ದರು.

7 / 7

Published On - 3:15 pm, Wed, 22 March 23

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್

ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ

‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ

ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ

ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ

ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ