ಜ್ಯೋತಿಶಾಸ್ತ್ರದಲ್ಲಿ ಒಟ್ಟು 9 ಗ್ರಹಗಳಿದ್ದು, ಏಳು ಗ್ರಹಗಳಲ್ಲಿ ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಹಾಗೂ ಅದರ ಎರಡು ನೆರಳಿನ ಗ್ರಹಗಳು ರಾಹು ಮತ್ತು ಕೇತು. ಗ್ರಹಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ವರ್ಗೀಕರಿಸಲಾಗಿದೆ, ಸೂರ್ಯ, ಗುರು ಮತ್ತು ಮಂಗಳ ಗ್ರಹಗಳು ಪುರುಷ ಗ್ರಹಗಳಾದರೆ, ಚಂದ್ರ ಮತ್ತು ಶುಕ್ರ ಸ್ತ್ರೀ ಗ್ರಹಗಳು. ಬುಧ ಗ್ರಹವು ಗಂಡು ಮತ್ತು ಹೆಣ್ಣು ಎರಡೂ ಗುಣಲಕ್ಷಣಗಳನ್ನು ಹೊಂದಿದೆ. ಗ್ರಹಗಳು ಒಂದು ನಿರ್ದಿಷ್ಟ ಮನೆಯಲ್ಲಿದ್ದಾಗಲೆಲ್ಲಾ ಅದು ಮನೆ, ಕುಟುಂಬ, ಉದ್ಯೋಗ, ಹಣಕಾಸಿನ ಸ್ಥಿತಿ ಮತ್ತು ಹಲವಾರು ವಿಧಗಳಲ್ಲಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯವನ್ನು ನಂಬುವವರು ತಮ್ಮ ಜೀವನವನ್ನು ಇನ್ನಷ್ಟು ಉತ್ತಮವಾಗಿ ರೂಪಿಸಿಕೊಳ್ಳಲು ಗ್ರಹಗಳ ಸ್ಥಾನ, ರಾಶಿಚಕ್ರದ ಮೂಲಕ ಭವಿಷ್ಯವನ್ನು ತಿಳಿಯುವುದು ವಾಡಿಕೆ. ನಾವಿಂದು ಈ ಲೇಖನದಲ್ಲಿ ಗ್ರಹಗಳ ಗುಣಲಕ್ಷಣಗಳೇನು, ಇವುಗಳ ಪರಿಣಾಮ, ಲಾಭದಾಯಕ ಹಾಗೂ ಅದೃಷ್ಟದ ಗ್ರಹಗಳು ಯಾವುವು ತಿಳಿಸಲಿದ್ದೇವೆ: