- Kannada News Photo gallery In Bagalakote State level sports event for deaf challenged was highlighted, Kannada News
ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ ಎಲ್ಲವೂ ಕೈ ಸನ್ನೆಗಳ ಮೂಲಕವೇ! ಗಮನಸೆಳೆದ ರಾಜ್ಯ ಮಟ್ಟದ ವಿಶೇಷಚೇತನರ ಕ್ರೀಡಾಕೂಟ
ಅಲ್ಲಿ 500ಕ್ಕೂ ಅಧಿಕ ಜನ ಕ್ರೀಡಾಪಟುಗಳಿದ್ದರು, ಎಲ್ಲರದ್ದು, ಕೈ ಸನ್ನೆ ಬಾಯಿಸನ್ನೆ ಮೂಲಕವೇ ಸಂವಹನ ನಡೆಯುತ್ತಿತ್ತು. ಆಟಗಾರರ ಭರ್ಜರಿಯಾಗಿ ಹುರಿದುಂಬಿಸಲು ಕೈ ಸನ್ನೆಗಳ ಮೂಲಕವೇ ಪ್ರೋತ್ಸಾಹ ನೀಡಲಾಗುತ್ತಿತ್ತು. ಗದ್ದಲ ಗಲಾಟೆ ಕೂಗಾಟ ಚೀರಾಟ ಇರದೆ ಇದ್ದರೂ ಕೂಡ ಆಟದ ಕ್ರೇಜ್ ಜಾಸ್ತಿಯಾಗಿತ್ತು.ಅಷ್ಟಕ್ಕೂ ಇಂತಹ ಕ್ರೀಡೆ ನಡೆದಿದ್ದು ಎಲ್ಲಿ? ಯಾರು ಆಟಗಾರರು? ಇಲ್ಲಿದೆ ಡೀಟೇಲ್ಸ್.
Updated on:Sep 27, 2024 | 7:22 PM

ಮಾತು ಬರುವುದಿಲ್ಲ, ಕಿವಿ ಕೇಳೋದಿಲ್ಲ ಎಲ್ಲವೂ ಕೈ ಸನ್ನೆಗಳ ಮೂಲಕವೇ ಅರ್ಥ ಮಾಡಿಸುವುದು ಹಾಗೂ ಅರ್ಥ ಮಾಡಿಕೊಳ್ಳುವುದು. ಆದರೂ ಎಲ್ಲರ ಜೊತೆಗೆ ಭರ್ಜರಿಯಾಗಿ ಓಟ, ಹೈಜಂಪ್, ಲಾಂಗ್ ಜಂಪ್, ಗುಂಡೆಸೆತ ಸೇರಿ ಎಲ್ಲಾ ಆಟದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದ ಕಿವುಡ ವಿಶೇಷ ಚೇತನ ಕ್ರೀಡಾಪಟುಗಳು.

ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕ್ರೀಡಾ ಮೈದಾನದಲ್ಲಿ. ಬಸವೇಶ್ವರ ಕ್ರೀಡಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 14ನೇ ಕರ್ನಾಟಕ ರಾಜ್ಯಮಟ್ಟದ ಕಿವುಡ ವಿಶೇಷಚೇತನರ ಅಥ್ಲೆಟಿಕ್ಸ್ನ್ನು ನಡೆಯುತ್ತಿದೆ. ಕರ್ನಾಟಕ ಡೆಪ್ ಸ್ಪೋರ್ಟ್ಸ್ ಫೆಡರೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಬಾಗಲಕೋಟೆ ಜಿಲ್ಲೆಯ ಡೆಪ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟವನ್ನು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಹಾಗೂ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟನೆಯನ್ನು ಮಾಡಿದರು. ಕ್ರೀಡಾ ಜ್ಯೋತಿ ಬೆಳಗಿ, ಧ್ವಜಾರೋಹಣ ಮಾಡಿ ಎಲ್ಲ ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡಿ ಶುಭಕೋರಿದರು. ಕರ್ನಾಟಕ ರಾಜ್ಯದಂತ 25 ಜಿಲ್ಲೆಗಳಿಂದ 500ಕ್ಕೂ ಅಧಿಕ ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಪ್ರಥಮ,ದ್ವಿತೀಯ ಸ್ಥಾನ ಪಡೆದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.

ಕ್ರೀಡಾಕೂಟವನ್ನು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಹಾಗೂ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟನೆಯನ್ನು ಮಾಡಿದರು. ಕ್ರೀಡಾ ಜ್ಯೋತಿ ಬೆಳಗಿ, ಧ್ವಜಾರೋಹಣ ಮಾಡಿ ಎಲ್ಲ ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡಿ ಶುಭಕೋರಿದರು. ಕರ್ನಾಟಕ ರಾಜ್ಯದಂತ 25 ಜಿಲ್ಲೆಗಳಿಂದ 500ಕ್ಕೂ ಅಧಿಕ ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಪ್ರಥಮ,ದ್ವಿತೀಯ ಸ್ಥಾನ ಪಡೆದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.

ಇಲ್ಲಿ ಎಲ್ಲ ಕ್ರೀಡಾಪಟುಗಳನ್ನು ಸನ್ನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು. ಕ್ರೀಡಾಪಟುಗಳು ಯಾವುದೇ ರೀತಿ ಸಾಮಾನ್ಯ ವ್ಯಕ್ತಿಗಳಿಗೆ ಕಮ್ಮಿ ಇಲ್ಲದಂತೆ ಆಟದಲ್ಲಿ ಭಾಗಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಓಟ, ಹೈ ಜಂಪ್, ಲಾಂಗ್ ಜಂಪ್ ಗುಂಡೆಸೆತ, ಎಲ್ಲ ಸಾಹಸ ಕ್ರೀಡೆಗಳನ್ನು ಕೂಡ ಸಾಮಾನ್ಯ ಕ್ರೀಡಾಪಟುಗಳಂತೆ ಅತಿ ಉತ್ಸಾಹದಿಂದ ಆಡಿದರು. ಎಲ್ಲವನ್ನೂ ಕೂಡ ಸನ್ನೆಗಳು ಹಾಗೂ ನಂಬರ್ ನೋಡುವ ಮೂಲಕ ಅರ್ಥ ಮಾಡಿಕೊಂಡು ಕ್ರೀಡೆಯನ್ನು ಸಂಪೂರ್ಣವಾಗಿ ಸಂಭ್ರಮಿಸಿದರು.

ಕ್ರೀಡೆ ನಂತರ ಎಲ್ಲರೂ ಕೂಡ ಜೊತೆಯಾಗಿ ಊಟವನ್ನು ಸವಿದರು. ಇಂತಹ ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಿಗಬೇಕಾದಂತ ಸಂಪೂರ್ಣ ಬೆಂಬಲ , ಆರ್ಥಿಕ ಸಹಕಾರ ಸಿಗುತ್ತಿಲ್ಲ ಎಂಬ ಕೊರಗು ಮಾತ್ರ ಕಾಡುತ್ತಿದೆ. ಉಳಿದ ವಿಶೇಷ ಚೇತನರಿಗೆ ಸಿಗುವಂತಹ ಸಹಕಾರ ಆರ್ಥಿಕ ಬೆಂಬಲ ಇವರಿಗೆ ಸಿಗುತ್ತಿಲ್ಲ. ಸರ್ಕಾರ, ಸಂಸ್ಥೆಗಳಾಗಲಿ, ಇಂತಹ ಕ್ರೀಡಾಪಟುಗಳಿಗೆ ತನು ಮನ ಧನ ಸಹಕಾರ ನೀಡು ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ವಿಶೇಷಚೇತನರ ಅಗ್ರಹವಾಗಿದೆ.
Published On - 7:21 pm, Fri, 27 September 24




