Sign In

By signing in or creating an account, you agree with Associated Broadcasting Company's Terms & Conditions and Privacy Policy.

D Gukesh: ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆ; ಗುರುವನ್ನೇ ಮೀರಿಸಿದ ಶಿಷ್ಯ ಗುಕೇಶ್

Gukesh's Chess Triumph: 2024ನೇ ಇಸವಿಯು ಭಾರತೀಯ ಚೆಸ್‌ಗೆ ಸ್ಮರಣೀಯ ವರ್ಷವಾಗಿದೆ. 18 ವರ್ಷದ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದು ಅತಿ ಕಿರಿಯ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಇದಲ್ಲದೆ, ಒಂದೇ ವರ್ಷದಲ್ಲಿ ಅಭ್ಯರ್ಥಿಗಳ ಪಂದ್ಯಾವಳಿ ಜಯ, ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್‌ಶಿಪ್ ಗೆಲುವು ಸೇರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಪೃಥ್ವಿಶಂಕರ
|

Updated on: Dec 12, 2024 | 10:33 PM

21ನೇ ಶತಮಾನದ ಮೊದಲ ವರ್ಷ ಅಂದರೆ 2000ನೇ ಇಸವಿ ಭಾರತೀಯ ಚೆಸ್‌ಗೆ ವಿಶೇಷವಾಗಿತ್ತು. ಆ ವರ್ಷ, ಮೊದಲ ಬಾರಿಗೆ ಚೆಸ್ ಜಗತ್ತಿನಲ್ಲಿ ಭಾರತೀಯನೊಬ್ಬ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು.

1 / 8
ಈಗ 2024 ಭಾರತೀಯ ಚೆಸ್‌ಗೆ ಸ್ಮರಣೀಯ ರೀತಿಯಲ್ಲಿ ಕೊನೆಗೊಂಡಿದೆ. ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರ ಜೊತೆಗೆ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

2 / 8
18ರ ಹರೆಯದ ದೊಮ್ಮರಾಜು ಗುಕೇಶ್ ಅವರು ಡಿಸೆಂಬರ್ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಪ್ರಪಂಚದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡರು. ಹಾಗೆಯೇ ಭಾರತದ ಮೊದಲ ಮತ್ತು ಶ್ರೇಷ್ಠ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

3 / 8
ಭಾರತಕ್ಕೆ ಚೆಸ್ ಕ್ರಾಂತಿ ತಂದ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಇದೀಗ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿರುವ ಗುಕೇಶ್ ಕೂಡ ವಿಶ್ವನಾಥನ್ ಆನಂದ್ ಅವರ ಅಕಾಡೆಮಿಯಿಂದ ಬಂದಿರುವುದು ಸಂತೋಷದ ಕಾಕತಾಳೀಯವಾಗಿದೆ. ಹಾಗೆಯೇ ಈ ಚಾಂಪಿಯನ್‌ಶಿಪ್‌ ಗೆದ್ದಿರುವ ಗುಕೇಶ್, ಗುರು ಆನಂದ್ ಅವರು ಮಾಡಿರದ ಸಾಧನೆಯನ್ನು ಈ ಒಂದೇ ವರ್ಷದಲ್ಲಿ ಸಾಧಿಸಿ ತೋರಿಸಿದ್ದಾರೆ.

4 / 8
ಈ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಗುಕೇಶ್ ಮೊದಲನೇಯದ್ದಾಗಿ ಕಳೆದ ಏಪ್ರಿಲ್​ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸ್ಪರ್ಧೆಯಾದ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು. ಇದರ ಜೊತೆಗೆ ಈ ಪಂದ್ಯಾವಳಿಯಲ್ಲಿ 9 ಅಂಕ ಗಳಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿದಲ್ಲದೆ, ಕೇವಲ 17 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದರು.

5 / 8
ಎರಡನೇಯದ್ದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ, ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್​ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಗುಕೇಶ್ ಮತ್ತು ಇತರ ಆಟಗಾರರು ಒಟ್ಟಾಗಿ ಉತ್ತಮ ಪ್ರದರ್ಶನ ನೀಡಿ, ಮೊದಲ ಬಾರಿಗೆ ಒಲಿಂಪಿಯಾಡ್‌ನ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರು.

6 / 8
ಚೆಸ್ ಒಲಿಂಪಿಯಾಡ್​ನಲ್ಲಿ ಗುಕೇಶ್ ಜೊತೆಗೆ ಆರ್ ಪ್ರಗ್ನಾನಂದ್, ವಿದಿತ್ ಗುಜರಾತಿ ಮತ್ತು ಅರ್ಜುನ್ ಅರ್ಗಾಸ್ಸಿ ಕೂಡ ಭಾರತ ತಂಡದ ಭಾಗವಾಗಿದ್ದರು. ಇಷ್ಟೇ ಅಲ್ಲ, ಗುಕೇಶ್ ಬೋರ್ಡ್ 1ರಲ್ಲಿ ಅದ್ಭುತ ಪ್ರದರ್ಶನ ನೀಡಿ ವೈಯಕ್ತಿಕ ಚಿನ್ನದ ಪದಕವನ್ನೂ ಗೆದ್ದರು.

7 / 8
ಮೂರನೇಯದ್ದಾಗಿ ಇದೇ ವರ್ಷ ವಿಶ್ವ ಚೆಸ್ ಚಾಂಪಿಯನ್​ಶಿಪ್​ ಫೈನಲ್​ಗೆ ಎಂಟ್ರಿಕೊಟ್ಟಿದ್ದ ಗುಕೇಶ್ ಹದಿನೈದು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ 7.5- 6.5 ಅಂಕಗಳ ಅಂತರದಿಂದ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ 12 ವರ್ಷಗಳ ಬಳಿಕ ಭಾರತದ ಮುಕುಟಕ್ಕೆ ವಿಶ್ವ ಚೆಸ್ ಚಾಂಪಿಯನ್ ಕಿರೀಟವನ್ನು ತೊಡಿಸಿದ್ದಾರೆ.

8 / 8
Follow us