ಕ್ರೀಡೆಯಲ್ಲಿ ಮಿಂಚಿ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಭಾರತದ ಮಹಿಳಾ ಕ್ರೀಡಾಪಟುಗಳಿವರು

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರ ಫಲವಾಗಿ ಹಲವಾರು ಮಹಿಳಾ ಆಟಗಾರ್ತಿಯರಿಗೆ ಭದ್ರತಾ ಪಡೆ ಸೇರುವ ಅವಕಾಶ ಸಿಕ್ಕಿತು. ಭದ್ರತಾ ಪಡೆಗೆ ಸೇರ್ಪಡೆಯಾದ ಅಂತಹ ಕೆಲವು ಭಾರತೀಯ ಮಹಿಳಾ ಆಟಗಾರರ ಬಗ್ಗೆ ವಿವರ ಇಲ್ಲಿದೆ.

Jan 26, 2022 | 5:05 PM
TV9kannada Web Team

| Edited By: pruthvi Shankar

Jan 26, 2022 | 5:05 PM

ಭಾರತದ ಮಹಿಳೆಯರು ಕ್ರೀಡಾ ಲೋಕದಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಭಾರತೀಯ ಮಹಿಳಾ ಆಟಗಾರ್ತಿಯರು ವಿವಿಧ ಕ್ರೀಡೆಗಳಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ಅದು ಬಾಕ್ಸಿಂಗ್ ಅಥವಾ ವೇಟ್ ಲಿಫ್ಟಿಂಗ್ ಅಥವಾ ಅಥ್ಲೆಟಿಕ್ಸ್ ಆಗಿರಲಿ. ಭಾರತದ ಮಹಿಳೆಯರು ಪ್ರತಿ ಪಂದ್ಯದಲ್ಲೂ ಮುಂದಿದ್ದಾರೆ. ಇದಕ್ಕಾಗಿ ಬಹುಮಾನವನ್ನೂ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರ ಫಲವಾಗಿ ಹಲವಾರು ಮಹಿಳಾ ಆಟಗಾರ್ತಿಯರಿಗೆ ಭದ್ರತಾ ಪಡೆ ಸೇರುವ ಅವಕಾಶ ಸಿಕ್ಕಿತು. ಭದ್ರತಾ ಪಡೆಗೆ ಸೇರ್ಪಡೆಯಾದ ಅಂತಹ ಕೆಲವು ಭಾರತೀಯ ಮಹಿಳಾ ಆಟಗಾರರ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

1 / 7
ಟೋಕಿಯೊ ಒಲಿಂಪಿಕ್ಸ್-2020 ರಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದ ಲೋವ್ಲಿನಾ ಬೊರ್ಗೊಹೈನ್ ಅವರಿಗೆ ಅವರ ತವರು ರಾಜ್ಯ ಪೋಲೀಸ್‌ ಹುದ್ದೆ ನೀಡಿ ಗೌರವಿಸಿತು. ಅಸ್ಸಾಂ ಸರ್ಕಾರವು ಲೊವ್ಲಿನಾ ಅವರಿಗೆ ಡಿಎಸ್ಪಿ ಹುದ್ದೆಯನ್ನು ನೀಡಿ ಗೌರವಿಸಿದೆ.

2 / 7
ಲೋವ್ಲಿನಾ ರಾಜ್ಯದಿಂದ ಬಂದಿರುವ ಓಟಗಾರ್ತಿ ಹಿಮಾ ದಾಸ್ ಕೂಡ ಪೊಲೀಸ್ ಕೆಲಸವನ್ನು ಹೊಂದಿದ್ದಾರೆ. 2018 ರಲ್ಲಿ, 400 ಮೀಟರ್ಸ್ ಜೂನಿಯರ್ ವಿಶ್ವ ಚಾಂಪಿಯನ್ ಹಿಮಾ ಅವರನ್ನು ಮಾಜಿ ಕ್ರೀಡಾ ಸಚಿವ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನ್ವಾಲ್ ಅವರು ಈ ಹುದ್ದೆಯೊಂದಿಗೆ ಗೌರವಿಸಿದರು. ಹಿಮಾ ಟೋಕಿಯೊದಲ್ಲಿ ಅದ್ಭುತಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವರು ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

3 / 7
ಈಶಾನ್ಯ ರಾಜ್ಯವಾದ ಮಣಿಪುರದಿಂದ ಬಂದಿರುವ ಎಂಸಿ ಮೇರಿ ಕೋಮ್ ಅವರು ಲೋವ್ಲಿನಾಗಿಂತ ಮೊದಲು ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕವನ್ನು ಪಡೆದ ಮೊದಲ ಆಟಗಾರ್ತಿಯಾಗಿದ್ದಾರೆ. ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ನಂತರ ಮಣಿಪುರ ಸರ್ಕಾರದಿಂದ ಎಸ್ಪಿಯಾಗಿ ನೇಮಕಗೊಂಡರು.

4 / 7
ಮಣಿಪುರದ ನಿವಾಸಿ ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರ ನಂತರ, ಮಣಿಪುರ ಸರ್ಕಾರವು ಅವರಿಗೆ ತನ್ನ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ (ಕ್ರೀಡೆ) ಹುದ್ದೆಯನ್ನು ನೀಡಿ ಗೌರವಿಸಿತು.

5 / 7
ಭಾರತದ ಅತ್ಯಂತ ಪ್ರಸಿದ್ಧ ಮಹಿಳಾ ಕುಸ್ತಿಪಟು ಗೀತಾ ಫೋಗಟ್ ಅವರಿಗೂ ಹರಿಯಾಣ ಸರ್ಕಾರ ತನ್ನ ಪೊಲೀಸ್ ಇಲಾಖೆಯಲ್ಲಿ ಹುದ್ದೆ ನೀಡಿ ಗೌರವಿಸಿದೆ. ಅವರನ್ನು ಹರಿಯಾಣ ಸರ್ಕಾರವು 2016 ರ ಡಿಎಸ್ಪಿಯಾಗಿ ನೇಮಿಸಿತು. ಗೀತಾ 2010ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

6 / 7
ಗೀತಾ ಅವರ ಸಹೋದರಿ ಬಬಿತಾ ಫೋಗಟ್ ಅವರನ್ನು 2013 ರಲ್ಲಿ ಹರ್ಯಾಣ ಸರ್ಕಾರವು ಕ್ರೀಡಾ ಕೋಟಾದಿಂದ ಸಬ್-ಇನ್‌ಸ್ಪೆಕ್ಟರ್ ಆಗಿ ನೇಮಿಸಿತು, ಆದರೆ 2019 ರಲ್ಲಿ, ಬಬಿತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

7 / 7

Follow us on

Most Read Stories

Click on your DTH Provider to Add TV9 Kannada