ಗಾಲಿ ಜನಾರ್ದನ ರೆಡ್ಡೆ ಸದ್ಯ ತಮ್ಮ ಹೊಸ ಕೆಆರ್ಪಿಪಿ ಪಕ್ಷ ಸ್ಥಾಪನೆ ಮಾಡಿ ರಾಜಕೀಯದ ಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಸದ್ಯ ಅಜ್ಮೀರ್ ದರ್ಗಾಗೆ ಭೇಟಿ ನೀಡಿದ್ದಾರೆ.
ಸಂತ ಖಾಜಾ ಗರೀಬ್ ನವಾಜ್ ದರ್ಗಾದಲ್ಲಿ ರೆಡ್ಡಿ ದಂಪತಿಗಳು ಚಾದರ್ ಸೇವೆ ಸಲ್ಲಿಸಿದ್ದಾರೆ.
ಇಷ್ಟಾರ್ಥ ಸಿದ್ದಿಗಾಗಿ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾರಿಂದ ವಿಶೇಷ ಚಾದರ್ ಸೇವೆ ಸಲ್ಲಿಸಲಾಯಿತು.
ಕೊಪ್ಪಳ, ಗಂಗಾವತಿ ಕ್ಷೇತ್ರದ ಪ್ರಮುಖ ನಾಯಕರೊಂದಿಗೆ ರೆಡ್ಡಿ ದರ್ಗಾ ಭೇಟಿ ನೀಡಿದ್ದಾರೆ.
ಹೊಸ ಪಕ್ಷ ಸ್ಥಾಪನೆ ಮಾಡಿರುವ ಗಾಲಿ ಜನಾರ್ದನ ರೆಡ್ಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.