Updated on: Jun 08, 2022 | 5:09 PM
ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿ ಎನ್ನುವ ಕಾರಣಕ್ಕೆ ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಜಾನ್ವಿಗೆ ಸಿಕ್ಕಿಲ್ಲ.
‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಬವಾಲ್’ ಮತ್ತು ‘ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಸಿನಿಮಾ ಈ ವರ್ಷ ಅಕ್ಟೋಬರ್ 7ರಂದು ತೆರೆಗೆ ಬರುತ್ತಿದೆ. ‘ಬವಾಲ್’ 2023ರ ಏಪ್ರಿಲ್ 7ರಂದು ಬಿಡುಗಡೆ ಆಗುತ್ತಿದೆ.
ಈಗ ಅವರು ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಾನ್ವಿ ಕಪೂರ್ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದು ಅವರ ಫ್ಯಾನ್ ಪೇಜ್ನಲ್ಲಿ ಸಖತ್ ವೈರಲ್ ಆಗುತ್ತದೆ.