- Kannada News Photo gallery JP Nadda on Ambedkar: BJP's Affection vs Congress's Aversion he shares some facts kannada news
ಅಂಬೇಡ್ಕರ್ ಬಗ್ಗೆ ಬಿಜೆಪಿಗಿರುವ ಪ್ರೀತಿ, ಕಾಂಗ್ರೆಸ್ಗಿರುವ ದ್ವೇಷ ಎಂಥದ್ದು ವಿವರಿಸಿದ ಜೆಪಿ ನಡ್ಡಾ
JP Nadda: ಕಾಂಗ್ರೆಸ್ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.
Updated on: Dec 19, 2024 | 12:22 PM

ಕಾಂಗ್ರೆಸ್ ಕಳೆದ ಎರಡು ದಿನಗಳಿಂದ ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಆಡಿದ ಮಾತುಗಳ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆಲ್ಲಾ ಪ್ರತ್ಯುತ್ತರ ಎಂಬುವಂತೆ ಬಿಜೆಪಿ ಅಧ್ಯಕ್ಷಜೆಪಿ ನಡ್ಡಾ ಬಿಜೆಪಿ ಅಂಬೇಡ್ಕರ್ ಅವರ ಬಗ್ಗೆ ಇರುವ ಪ್ರೀತಿ ಹಾಗೂ ಕಾಂಗ್ರೆಸ್ಗೆ ಇರುವ ದ್ವೇಷದ ಬಗ್ಗೆ ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.

ಅಲಿಪುರ ರಸ್ತೆಯನ್ನು ಬಹಳ ಹಿಂದೆಯೇ ಜನರಿಗೆ ಸ್ಫೂರ್ತಿ ನೀಡುವ ಭವ್ಯ ಸ್ಮಾರಕವಾಗಿ ಪರಿವರ್ತಿಸಬೇಕಿತ್ತು, ಆದರೆ ಅಂಬೇಡ್ಕರ್ ಅವರ ವಿರುದ್ಧ ದ್ವೇಷವಿದ್ದ ಕಾರಣ ಏನೂ ಮಾಡಲಿಲ್ಲ , ಅಲಿಪುರ ರಸ್ತೆಯನ್ನು ಅಭಿವೃದ್ಧಿಪಡಿಸಿದ ಗೌರವ ನಮ್ಮ ಎನ್ಡಿಎ ಸರ್ಕಾರಕ್ಕಿದೆ.

ಮುಂಬೈ ಚೈತನ್ಯ ಭೂಮಿ: ದಶಕಗಳ ಕಾಲ ಕಾಂಗ್ರೆಸ್ ಭವ್ಯ ಸ್ಮಾರಕವನ್ನು ಮಾಡುವ ಪೊಳ್ಳು ಭರವಸೆಯನ್ನು ನೀಡುತ್ತಾ ಬಂದಿತ್ತು. 2015ರಲ್ಲಿ ನಮ್ಮ ಸರ್ಕಾರದಿಂದ ಅದು ನೆರವೇರಿತ್ತು, ಪ್ರಧಾನಿ ಮೋದಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು.

ನಮ್ಮ ಸಂವಿಧಾನವನ್ನು ರಚಿಸುವಲ್ಲಿ ಅಂಬೇಡ್ಕರ್ ಪಾತ್ರವೇ ಇಲ್ಲ ಎಂದು ಕಾಂಗ್ರೆಸ್ ಯೋಚಿಸಿದಂತಿದೆ. ಇಲ್ಲಿರುವ ಕೆಲವು ಬರಹಗಳು ಅದನ್ನೇ ಹೇಳುತ್ತವೆ ಎಂದು ಜೆಪಿ ನಡ್ಡಾ ಬರೆದಿದ್ದಾರೆ. ಆದರೆ ಕೆಲವು ಅಳಿಸಲಾಗದ ಭಾವನೆಗಳು ಯಾರ ಪ್ರಯತ್ನದಿಂದಲೂ ನಶಿಸುವುದಿಲ್ಲ.

ಅಂಬೇಡ್ಕರ್ ಸ್ಮರಣಾರ್ಥ ವಿಶ್ವದರ್ಜೆಯ ಕೇಂದ್ರವನ್ನು ನಿರ್ಮಿಸಬೇಕಿತ್ತು, ಅಂತಿಮವಾಗಿ 2017ರಲ್ಲಿ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಕಾಂಗ್ರೆಸ್ ನಾಯಕರು ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ಸುಳ್ಳುಗಳನ್ನು ಹರಡುವುದೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಇದ್ದ ಲಂಡನ್ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. 2015ರಲ್ಲಿ ಪ್ರಧಾನಿ ಮೋದಿ ಯುಕೆಗೆ ಭೇಟಿ ನೀಡಿದ್ದರು.

ಜೂನ್ನಲ್ಲಿ ನೀವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ ಮತ್ತು ಸಿಕ್ಕಿಂನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ್ದೀರಿ, ಅಕ್ಟೋಬರ್ನಲ್ಲಿ ಹರ್ಯಾಣದಲ್ಲಿ ಸೋತಿದ್ದೀರಿ, ನವೆಂಬರ್ನಲ್ಲಿ ಇನ್ನೂ ಕೆಟ್ಟದಾಗಿ ಸೋತಿದ್ದೀರಿ. ಕನಿಷ್ಠ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿ, ಸತ್ಯ ಯಾವಾಗಲೂ ಗೆಲ್ಲುತ್ತದೆ, ಜೈ ಭೀಮ್ ಎಂದಿದ್ದಾರೆ.




