‘ಪುಷ್ಪ 2’ ಚಿತ್ರದಲ್ಲಿ ದಂಡಿ ಕನ್ನಡದ ಕಲಾವಿದರು; ಯಾರ ಪಾತ್ರ ಹೇಗಿದೆ?

Updated on: Dec 05, 2024 | 11:59 AM

‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 5) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮೊದಲಾದವರು ನಟಿಸಿದ್ದಾರೆ. ಇದು ತೆಲುಗು ಸಿನಿಮಾ. ಇದರಲ್ಲಿ ಕನ್ನಡದವರೂ ನಟಿಸಿ ಗಮನ ಸೆಳೆದಿದ್ದಾರೆ. ಆ ಕಲಾವಿದರ ಬಗ್ಗೆ ಇಲ್ಲಿದೆ ವಿವರ.

1 / 5
ರಶ್ಮಿಕಾ ಮಂದಣ್ಣ ಕನ್ನಡದ ನಟಿಯಾದರೂ ಸದ್ಯ ಟಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಪರಭಾಷೆಯಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ‘ಪುಷ್ಪ 2’ ಚಿತ್ರದಲ್ಲಿ ಇರುವ ಕನ್ನಡದ ಕಲಾವಿದರ ಪೈಕಿ ರಶ್ಮಿಕಾ ಕೂಡ ಒಬ್ಬರು. ಅವರು ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುತ್ತಾರೆ.

2 / 5
‘ಕಿಸ್ಸಕ್..’ ಹಾಡಿನಲ್ಲಿ ಶ್ರೀಲೀಲಾ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡು ಭರ್ಜರಿ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡಿನಲ್ಲಿ ಶ್ರೀಲೀಲಾ ಅವರು ತಮ್ಮ ಗ್ಲಾಮರ್ ತೋರಿಸಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಾಡು ಗಮನ ಸೆಳೆದಿದೆ.

3 / 5
ತಾರಕ್ ಪೊನ್ನಪ್ಪ ಅವರು ವಿಲನ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ‘ಪುಷ್ಪ 2’ ಚಿತ್ರದ ದ್ವೀತಿಯಾರ್ಧದಲ್ಲಿ ಬರುವ ಅವರು ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಿದ್ದಾರೆ. ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ.

4 / 5
‘ಪುಷ್ಪ’ ಚಿತ್ರದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಹೆಸರಿನ ಪಾತ್ರ ಮಾಡಿದ್ದರು. ಮೊದಲ ಭಾಗದಲ್ಲಿ ಅವರು ಗಾಯಗೊಂಡಿದ್ದರು. ದ್ವಿತೀಯಾರ್ಧದಲ್ಲಿ  ಅವರ ಆಗಮನ ಆಗುತ್ತದೆ. ಯಾವಾಗ? ಹೇಗೆ ಎಂಬುದಕ್ಕೆ ಸಿನಿಮಾ ನೋಡಬೇಕು.

5 / 5
ನಂದ ಗೋಪಾಲ್ ಅವರು ಕೂಡ ‘ಪುಷ್ಪ 2’ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ಅವರ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಬರದೇ ಇದ್ದರೂ ಕನ್ನಡದ ಹೀರೋ ಒಬ್ಬರು ಅವರು ನಟಿಸಿದ್ದಾರೆ ಅನ್ನೋದು ವಿಶೇಷ.