
ಖ್ಯಾತ ನಟಿ ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ಗುಡ್ ನ್ಯೂಸ್ ನೀಡಿದ್ದರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಪ್ರೆಗ್ನೆಂಟ್ ಎಂದು ಹೇಳಿಕೊಂಡಿದ್ದರು.

ಈಗ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಈ ಫೋಟೋಗಳನ್ನು ಪ್ರಣಿತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಹಸೆಮಣೆ ಏರಿದರು. ಕೊವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾದಲ್ಲಿ ಅವರಿಗೆ ಭರ್ಜರಿ ಖ್ಯಾತಿ ಸಿಕ್ಕಿತು. ಅನೇಕ ಸ್ಟಾರ್ ಹೀರೋಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಪ್ರಣಿತಾ ಸುಭಾಷ್ ನಟಿಸಿದ್ದಾರೆ. ಆ ಮೂಲಕ ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.