Updated on: Feb 10, 2024 | 10:24 PM
ಬಿಗ್ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಅನ್ನು ಕಾರ್ತಿಕ್ ಮಹೇಶ್ ಗೆದ್ದಿದ್ದು, ವಿನ್ನರ್ ಆದ ಬಳಿಕ ಅವರ ಜನಪ್ರಿಯತೆ ಹತ್ತುಪಟ್ಟಾಗಿದೆ.
ಬಿಗ್ಬಾಸ್ನಿಂದ ಹೊರಬಂದಾಗಿನಿಂದಲೂ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ, ಇವೆಂಟ್ಗಳಲ್ಲಿ ಕಾರ್ತಿಕ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ.
ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾ ಇವೆಂಟ್ಗಳನ್ನು ಅಟೆಂಡ್ ಮಾಡಿದ್ದಾರೆ.
ಇದೀಗ ಕಾರ್ತಿಕ್ ತಮ್ಮ ಬಿಗ್ಬಾಸ್ ಟ್ರೋಫಿಯೊಟ್ಟಿಗೆ ರಾಜಕೀಯ ಮುಖಂಡರನ್ನು ಭೇಟಿ ಆಗಿದ್ದಾರೆ. ಬಿಜೆಪಿ ರಾಜ್ಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಕಾರ್ತಿಕ್ ಭೇಟಿ ಆಗಿದ್ದಾರೆ.
ಆರ್ ಅಶೋಕ್ ಅವರಿಗೆ ತಮ್ಮ ಬಿಗ್ಬಾಸ್ ಟ್ರೋಫಿಯನ್ನು ತೋರಿಸಿರುವ ಕಾರ್ತಿಕ್ ಮಹೇಶ್, ಬಿಗ್ಬಾಸ್ನಲ್ಲಿ ಕಳೆದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಬಿಗ್ಬಾಸ್ ವಿನ್ನರ್ ಕಾರ್ತಿಕ್ ಅವರಿಗೆ ಆರ್ ಅಶೋಕ್ ಅವರು ಕಿರು ಸನ್ಮಾನ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಮಾ ಹರೀಶ್ ಸಹ ಕಾರ್ತಿಕ್ ಜೊತೆಗಿದ್ದರು.
ಬಿಗ್ಬಾಸ್ ಗೆದ್ದು ಬಂದಿರುವ ಕಾರ್ತಿಕ್ ಮಹೇಶ್ರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ.