
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಬಳಿದುಕೊಂಡು ಇವರು ಪೋಸ್ ಕೊಟ್ಟಿದ್ದಾರೆ.

ಕೃತಿ ಸನೋನ್ ಮನೆಯಲ್ಲೂ ಹೋಳಿ ಆಚರಣೆ ಜೋರಾಗಿದೆ. ಬಣ್ಣದಲ್ಲಿ ಇವರು ಮಿಂದೆದ್ದಿದ್ದಾರೆ. ಆ ಬಳಿಕ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

ಆಲಿಯಾ ಭಟ್ ಅವರು ಕೂಡ ಹೋಳಿ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಬಣ್ಣದ ಸ್ನಾನ ಮಾಡಿ ಮ್ಯೂಸಿಕ್ಗೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಕರೀನಾ ಕಪೂರ್ ಅವರು ಮುಸ್ಲಿಂ ಧರ್ಮದ ಕುಟುಂಬಕ್ಕೆ ಸೇರಿದರೂ ಹಿಂದೂ ಹಬ್ಬಗಳ ಆಚರಣೆ ನಿಲ್ಲಿಸಿಲ್ಲ. ಅವರು ಮಕ್ಕಳ ಜೊತೆ ಹೋಳಿ ಆಚರಿಸಿದ್ದಾರೆ.

ಚಿತ್ರರಂಗದಿಂದ ದೂರವೇ ಇರುವ ಪ್ರೀತಿ ಜಿಂಟಾ ಕೂಡ ಹೋಳಿ ಆಚರಿಸಿದ್ದಾರೆ. ಪತಿಯ ಜೊತೆ ಅವರು ಈ ಹಬ್ಬ ಆಚರಿಸಿದ್ದಾರೆ.

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾಗೆ ಹೋಳಿ ಹಬ್ಬ ಸಖತ್ ವಿಶೇಷ. ಈ ದಂಪತಿ ಖುಷಿಯಿಂದ ಹೋಳಿ ಆಚರಿಸಿ ಪೋಸ್ ಕೊಟ್ಟಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ಅವರು ಕತ್ರಿನಾ ಹಾಗೂ ನಿಕ್ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಮೈಗೆ ಬಣ್ಣ ಬಿದ್ದಿದೆ.