Updated on: Mar 25, 2024 | 12:09 PM
ಮೈಕಲ್ ಅಜಯ್ ಅವರ ಖ್ಯಾತಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಹೆಚ್ಚಾಗಿದೆ. ಅವರು ಹೋದಲ್ಲೆಲ್ಲ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಅವರು ಹಂಚಿಕೊಳ್ಳೋ ಫೋಟೋಗೂ ಭರ್ಜರಿ ಲೈಕ್ಸ್ ಸಿಗುತ್ತವೆ.
ಈಗ ಬಾಕ್ಸಿಂಗ್ ಮಾಡುತ್ತಿರುವ ಫೋಟೋನ ಮೈಕಲ್ ಅಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋನ ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.
ಮೈಕಲ್ ಅಜಯ್ ಅವರು ಜಿಮ್ ಜೊತೆ ಬಾಕ್ಸಿಂಗ್ ಕೂಡ ಮಾಡುತ್ತಾರೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಇದನ್ನು ಫ್ಯಾನ್ಸ್ ಸಖತ್ ಇಷ್ಟಪಡುತ್ತಾರೆ.
ಮೈಕಲ್ ಅಜಯ್ ಅವರು ದಿನ ನಿತ್ಯದ ಚಟುವಟಿಕೆಯ ವ್ಲೋಗ್ ಮಾಡುತ್ತಾರೆ. ಇದನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡು ವೀವ್ಸ್ ಗಿಟ್ಟಿಸಿಕೊಳ್ಳುತ್ತಾರೆ.
ವಿನಯ್ ಜೊತೆ ಮೈಕಲ್ಗೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರೂ ಅನೇಕ ಬಾರಿ ಪಾರ್ಟಿ ಮಾಡಿದ್ದೂ ಇದೆ. ಈ ವಿಡಿಯೋಗಳು ಈ ಮೊದಲು ವೈರಲ್ ಆಗಿತ್ತು.