- Kannada News Photo gallery Kavitha Gowda Baby bump photo goes viral Husband Chandan Kumar poses with wife cinema News
ಬೇಬಿಬಂಪ್ ತೋರಿಸಿ ಗಮನ ಸೆಳೆದ ನಟಿ ಕವಿತಾ ಗೌಡ
ಕವಿತಾ ಗೌಡ ಅವರ ಪತಿ ಚಂದನ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕವಿತಾ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಅವರಿಗೆ ಶೀಘ್ರವೇ ಮಗು ಜನಿಸಲಿದೆ. ಕವಿತಾ ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
Updated on: Aug 12, 2024 | 8:43 AM

ಕವಿತಾ ಗೌಡ ಅವರು ಪ್ರೇಗ್ನೆಂಟ್. ಈ ಖುಷಿ ಸುದ್ದಿಯನ್ನು ಕೆಲ ತಿಂಗಳ ಹಿಂದೆ ಅವರು ರಿವೀಲ್ ಮಾಡಿದ್ದರು. ಈಗ ಕವಿತಾ ಗೌಡ ಅವರು ಬೇಬಿ ಬಂಪ್ ಫೋಟೋ ತೋರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕವಿತಾ ಗೌಡ ಅವರ ಪತಿ ಚಂದನ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕವಿತಾ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಅವರಿಗೆ ಶೀಘ್ರವೇ ಮಗು ಜನಿಸಲಿದೆ.

ಕವಿತಾ ಗೌಡ ಅವರು ಕಿರುತೆರೆ ಮೂಲಕ ಗಮನ ಸೆಳೆದವರು. ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್ಗೂ ಅವರು ಕಾಲಿಟ್ಟಿದ್ದರು. ಚಂದನ್ ಅವರನ್ನು ಪ್ರೀತಿಸಿ ಮದುವೆ ಆದರು.

ಚಂದನ್ ಹಾಗೂ ಕವಿತಾ ಗೌಡ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದಾರೆ. ಸಿಂಪಲ್ ಆಗಿ ಅವರು ವಿವಾಹ ಆಗಿದ್ದಾರೆ. ಅವರು ಪತ್ನಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಚಂದನ್ ಹಾಗೂ ಕವಿತಾ ಹೋಟೆಲ್ ಉದ್ಯಮವನ್ನು ಹೊಂದಿದ್ದಾರೆ. ಈ ಮೂಲಕ ಅವರು ಹಣ ಗಳಿಕೆ ಮಾಡುತ್ತಾ ಇದ್ದಾರೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




