AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ ಏರ್​​ಪೋರ್ಟ್​​​ ಮಂಡಳಿಯಿಂದ ದತ್ತು: ಮುಗಿಲೆತ್ತರಕ್ಕೆ ಚಿಮ್ಮಿದ ಸರ್ಕಾರಿ ಶಾಲೆಯ ಸವಲತ್ತು

ಹೈಟೆಕ್ಕಾಗಿ ನಿರ್ಮಾಣಗೊಂಡಿರೋ ಸರ್ಕಾರಿ ಶಾಲಾ ಕಟ್ಟಡ. ಹೈಟೆಕ್ ಶಾಲೆಯಲ್ಲಿ ಟ್ಯಾಬ್​ಗಳನ್ನು ಹಿಡಿದು ಕಲಿಕೆಯಲ್ಲಿ ನಿರತರಾಗಿರೋ ಬಡ ಮಕ್ಕಳು.. ಅಂದಹಾಗೆ ಇಂತಹ ಹೈಟೆಕ್ ಸರ್ಕಾರಿ ಶಾಲೆಯಿರೋದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿಯಲ್ಲಿ. ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಕೃಪಾಶೀರ್ವಾದದಿಂದ ಇದು ಕೈಗೂಡಿದೆ.

ನವೀನ್ ಕುಮಾರ್ ಟಿ
| Edited By: |

Updated on: Feb 06, 2024 | 11:50 AM

Share
 ಹೈಟೆಕ್ಕಾಗಿ ನಿರ್ಮಾಣಗೊಂಡಿರೋ ಸರ್ಕಾರಿ ಶಾಲಾ ಕಟ್ಟಡ. ಹೈಟೆಕ್ ಶಾಲೆಯಲ್ಲಿ ಟ್ಯಾಬ್​ಗಳನ್ನು ಹಿಡಿದು ಕಲಿಕೆಯಲ್ಲಿ ನಿರತರಾಗಿರೋ ಬಡ ಮಕ್ಕಳು.. ಅಂದಹಾಗೆ ಇಂತಹ ಹೈಟೆಕ್ ಸರ್ಕಾರಿ ಶಾಲೆಯಿರೋದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿಯಲ್ಲಿ. ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಕೃಪಾಶೀರ್ವಾದದಿಂದ ಇದು ಕೈಗೂಡಿದೆ.

ಹೈಟೆಕ್ಕಾಗಿ ನಿರ್ಮಾಣಗೊಂಡಿರೋ ಸರ್ಕಾರಿ ಶಾಲಾ ಕಟ್ಟಡ. ಹೈಟೆಕ್ ಶಾಲೆಯಲ್ಲಿ ಟ್ಯಾಬ್​ಗಳನ್ನು ಹಿಡಿದು ಕಲಿಕೆಯಲ್ಲಿ ನಿರತರಾಗಿರೋ ಬಡ ಮಕ್ಕಳು.. ಅಂದಹಾಗೆ ಇಂತಹ ಹೈಟೆಕ್ ಸರ್ಕಾರಿ ಶಾಲೆಯಿರೋದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿಯಲ್ಲಿ. ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಕೃಪಾಶೀರ್ವಾದದಿಂದ ಇದು ಕೈಗೂಡಿದೆ.

1 / 12
ಸರ್ಕಾರಿ ಶಾಲೆ ಅಂದ್ರೆ ಸಾಕು ಅಲ್ಲಿ ಗುಣಮಟ್ಟದ ಶಿಕ್ಷಣ ಇರುವುದಿಲ್ಲ ಎಂದು ಅಲ್ಲಿಗೆ ತಮ್ಮ ಮಕ್ಕಳನ್ನ ಸೇರಿಸೋಕೆ ಪೋಷಕರು ಹಿಂದೇಟುಹಾಕುತ್ತಾರೆ. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆ ಇಂತಹ ಅಪವಾದಗಳಿಗಿಂತ ಭಿನ್ನವಾಗಿದೆ. ಸರ್ಕಾರಿ ಶಾಲೆ ಅಂದ್ರೆ ಹೀಗಿರಬೇಕು ಅಂತ ಪೋಷಕರ ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರು ಅಂತಿದ್ದಾರೆ. ಅರೆ ಅಂತಹ ಸರ್ಕಾರಿ ಶಾಲೆ ನಮ್ಮಲ್ಲಿ ಎಲ್ಲಿದೆ ಅನ್ನೂ ಪ್ರಶ್ನೆ ನಿಮ್ಮದಾದ್ರೆ ಒಮ್ಮೆ ಈ ಸ್ಟೋರಿ ನೋಡಿ ನಿಮಗೆ ಸಮಾಧಾನ ತರುವ ಉತ್ತರ ಸಿಗುತ್ತೆ.

2 / 12
ಅಂದಹಾಗೆ ಇಂತಹ ಹೈಟೆಕ್ ಸರ್ಕಾರಿ ಶಾಲೆಯಿರೋದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿಯಲ್ಲಿ. ಅಂದಹಾಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ಇದೀಗ ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್​ಆರ್​) ನಿರ್ಮಾಣ ಮಾಡಿ  ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿದೆ.

3 / 12
ಒಟ್ಟಾರೆ ಸರ್ಕಾರಿ ಶಾಲೆಗಳತ್ತ ಮಕ್ಕಳು ಬಾರದೇ ರಾಜ್ಯದ ಹಲವು ಕಡೆ ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿಗೆ ಬಂದಿದೆ. ಈ ನಡುವೆ ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ದೇವನಹಳ್ಳಿ ತಾಲೂಕಿನ ಹಲವು ಶಾಲೆಗಳನ್ನ ಹೈಟೆಕ್ ಶಾಲೆಗಳನ್ನಾಗಿ ಬದಲಾವಣೆ ಮಾಡಲು ತನ್ನ ಸಾಮಾಜಿಕ ಶೈಕ್ಷಣಿಕ ದತ್ತು ಜವಾಬ್ದಾರಿಯನ್ನ ಹೊತ್ತಿರುವುದು ನಿಜಕ್ಕೂ ಶ್ಲಾಘನೀಯ.

4 / 12
ಏರ್ಪೋಟ್ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಂಡಿರುವ ಏರ್ಪೋಟ್ ಆಡಳಿತ ಮಂಡಳಿ ಹಳೆಯ ಸರ್ಕಾರಿ ಶಾಲೆಗಳಿಗೆ ಹೊಸ ಹೈಟೆಕ್ ಸ್ಪರ್ಶ ನೀಡಿ ಉನ್ನತೀಕರಣ ಮಾಡ್ತಿದೆ. ಅದೇ ರೀತಿ ಅರದೇಶನಹಳ್ಳಿ ಸರ್ಕಾರಿ ಶಾಲೆಯನ್ನ 2018 ರಲ್ಲಿ ದತ್ತು ಪಡೆದ ಏರ್ಪೋಟ್ ಆಡಳಿತ ಮಂಡಳಿ ಸರ್ಕಾರಿ ಶಾಲೆಯನ್ನ  ಕೊಟ್ಯಾಂತರ ರೂ ಖರ್ಚು ಮಾಡಿ ಕಟ್ಟಿಸಲಾಗಿದೆ.

5 / 12
ಇದೀಗ ಈ ಸರ್ಕಾರಿ ಶಾಲೆಯನ್ನ ಉದ್ಘಾಟಿಸಿ ಮಕ್ಕಳ ಕಲಿಕೆಗೆ ಹಸ್ತಾಂತರ ಮಾಡಲಾಗಿದ್ದು, ಏರ್ಪೋಟ್ ಆಡಳಿತ ಮಂಡಳಿಯಿಂದಲೇ ಶಿಕ್ಷಕರನ್ನ ನೇಮಿಸಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡ್ತಿದೆ ಎಂದು ಏರ್ಪೋಟ್ ಸಮನ್ವಯ ಅಧಿಕಾರಿ ಹೇಮಂತ್ ತಿಳಿಸಿದ್ದಾರೆ.

6 / 12
ಅಂದಹಾಗೆ ಈ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದೆ ಕೇವಲ ನಾಲ್ಕು ಕೊಠಡಿಗಳು ಇದ್ದವು. ಇಲ್ಲಿಗೆ ಗ್ರಾಮ ಹಾಗೂ ಅಕ್ಕಪಕ್ಕದ ಊರುಗಳಿಂದ ಮಕ್ಕಳು ಬರಲು ಹಿಂದೇಟು ಹಾಕ್ತಿದ್ದರು. ಆದರೆ ಇದೀಗ ಏರ್ಪೋಟ್ ಕಡೆಯಿಂದ ಶಾಲೆಯನ್ನ ಎರಡು ಅಂತಸ್ತುಗಳ ಕಟ್ಟಡವನ್ನಾಗಿ ಮಾರ್ಪಡಿಸಿದ್ದು 20ಕ್ಕೂ ಹೆಚ್ಚು ಹೈಟೆಕ್ ಕೊಠಡಿಗಳನ್ನ ನಿರ್ಮಾಣ ಮಾಡಿಸಿದ್ದಾರೆ.

7 / 12
ಜೊತೆಗೆ ಪೂರ್ವಯೋಜಿತವಾಗಿ ಸುಮಾರು 20 ಶಿಕ್ಷಕರನ್ನ ವಿಷಯವಾರು ಮಕ್ಕಳಿಗೆ ಪಾಠ ಮಾಡಲು ಏರ್ಪೋಟ್ ಆಡಳಿತ ಮಂಡಳಿ ನಿಯೋಜಿಸಿದ್ದು ಶೈಕ್ಷಣಿಕೇತರವಾಗಿ ಬೇರೆ ಬೇರೆ ಜ್ಞಾನ ತುಂಬಲು ಶಾಲೆಯಲ್ಲಿ ಕರಾಟೆ, ಮ್ಯೂಸಿಕ್ ಅಲ್ಲದೆ ಹಣಕಾಸಿನ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಆಸ್ಟ್ರೇಲಿಯಾದ ಭೌದಿಕ ಪರೀಕ್ಷೆಗಳನ್ನ ಮಾಡಿ ಹೈಟೆಕ್ ಟಚ್ ಕೂಡ ನೀಡಿದ್ದಾರೆ.

8 / 12
ಈ ಹಿಂದೆ 1 ರಿಂದ 7 ರವರೆಗೆ 83 ಮಕ್ಕಳಿದ್ದ ಈ ಸರ್ಕಾರಿ ಶಾಲೆಗೆ ಇದೀಗ 411 ಮಕ್ಕಳು ಸೇರ್ಪಡೆಯಾಗಿದ್ದು ಸರ್ಕಾರಿ ಹೈಟೆಕ್ ಶಾಲೆಯತ್ತ ಪೋಷಕರು ಮಕ್ಕಳನ್ನ ಸೇರಿಸುತ್ತಿದ್ದಾರೆ. ಜೊತೆಗೆ ಎಲ್​​ಕೆಜಿ, ಯುಕೆಜಿಯನ್ನ ಕೂಡ ಆರಂಭಿಸಲಾಗಿದ್ದು ಇಂಗ್ಲಿಷ್ ಮಾಧ್ಯಮ ಕೂಡ ಆರಂಭಿಸಲಾಗಿದೆ.

9 / 12
ಅಲ್ಲದೆ ದತ್ತು ಪಡೆದ ಭಾಗವಾಗಿ ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ ಕೂಡ ಮಾಡುವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ ಈ ಶಾಲೆ ಎಂದು ಸುಮಾ, ಬಿಇಓ, ದೇವನಹಳ್ಳಿ ತಿಳಿಸಿದ್ದಾರೆ.

10 / 12
ದೇವನಹಳ್ಳಿ ಏರ್​​ಪೋರ್ಟ್​​​ ಮಂಡಳಿಯಿಂದ ದತ್ತು: ಮುಗಿಲೆತ್ತರಕ್ಕೆ ಚಿಮ್ಮಿದ ಸರ್ಕಾರಿ ಶಾಲೆಯ ಸವಲತ್ತು

11 / 12

12 / 12