Updated on: Mar 07, 2023 | 1:06 PM
ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ಅವರು ಇತ್ತೀಚೆಗೆ ಮದುವೆ ಆದರು. ಮದುವೆಯ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈಗ ಕಿಯಾರಾ ಅವರು ಹಳದಿ ಶಾಸ್ತ್ರದ ಫೋಟೋನ ಶೇರ್ ಮಾಡಿಕೊಂಡಿದ್ದಾರೆ.
ಇಂದು (ಮಾರ್ಚ್ 7) ಹೋಳಿ. ಬಣ್ಣ ಹಚ್ಚುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಕಿಯಾರಾ ಅವರು ಸಿದ್ದಾರ್ಥ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.
ಕಿಯಾರಾ ಹಾಗೂ ಸಿದ್ದಾರ್ಥ್ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಮದುವೆ ಆದರು. ಮದುವೆಗೂ ಮುನ್ನ ಹಳದಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಫೋಟೋಗಳನ್ನು ಕಿಯಾರಾ ಪೋಸ್ಟ್ ಮಾಡಿರಲಿಲ್ಲ.
ಹೋಳಿ ಹಬ್ಬದ ದಿನ ಕಿಯಾರಾ ಅವರು ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ. ಹಳದಿ ಹಚ್ಚಿಕೊಂಡು ಇಬ್ಬರೂ ಮಸ್ತ್ ಆಗಿ ಪೋಸ್ ನೀಡಿದ್ದಾರೆ.
ಕಿಯಾರಾ ಹಾಗೂ ಸಿದ್ದಾರ್ಥ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಇಬ್ಬರೂ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇವರು ಮದುವೆ ಆಗಿರುವುದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ.