- Kannada News Photo gallery Kiara Advani starts Bhool Bhulaiyaa 2 promotions amid breakup rumours with Sidharth Malhotra
ಬ್ರೇಕಪ್ ಗಾಸಿಪ್ಗೆ ಕಿವಿಗೊಡದೇ ‘ಭೂಲ್ ಭುಲಯ್ಯ 2’ ಪ್ರಮೋಷನ್ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ ಅವರು ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಜೋರಾಗಿದೆ. ಅದರ ನಡುವೆ ಕಿಯಾರಾ ಅವರು ‘ಭೂಲ್ ಭುಲಯ್ಯ 2’ ಪ್ರಮೋಷನ್ನಲ್ಲಿ ಭಾಗಿ ಆಗುತ್ತಿದ್ದಾರೆ.
Updated on: Apr 25, 2022 | 4:11 PM

Kiara Advani starts Bhool Bhulaiyaa 2 promotions amid breakup rumours with Sidharth Malhotra

Kiara Advani starts Bhool Bhulaiyaa 2 promotions amid breakup rumours with Sidharth Malhotra

ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏ.26ರಂದು ಇದರ ಟ್ರೇಲರ್ ರಿಲೀಸ್ ಆಗಲಿದೆ. ಜನರ ಪ್ರತಿಕ್ರಿಯೆ ತಿಳಿಯಲು ಕಿಯಾರಾ ಅಡ್ವಾಣಿ ಉತ್ಸುಕರಾಗಿದ್ದಾರೆ.

‘ಭೂಲ್ ಭುಲಯ್ಯ 2’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅವರು ಜೋಡಿ ಆಗಿದ್ದಾರೆ. ಹಿರಿಯ ನಟಿ ಟಬು ಕೂಡ ಇದರಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇ 20ರಂದು ಈ ಚಿತ್ರ ತೆರೆಕಾಣಲಿದೆ.

ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ‘ಶೇರ್ಷಾ’ ಚಿತ್ರದ ಮೂಲಕ ಇಬ್ಬರಿಗೂ ದೊಡ್ಡ ಗೆಲುವು ಸಿಕ್ಕಿತು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬ ಗಾಸಿಪ್ ಹಬ್ಬಿದೆ.




