AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ: ಬಂದೂಕಿಗೆ ಪೂಜೆ, ಗುಂಡು ಹೊಡೆದು ಶೌರ್ಯ ಮೆರೆದ ಕೊಡವರು

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ ನಡೆಯುತ್ತದೆ. ಈ ಕೋವಿ ಹಬ್ಬದಲ್ಲಿ ಕೊಡಗಿನ ಮೂಲನಿವಾಸಿಗಳ ಬಳಿಯಿರುವ ಬಂದೂಕನ್ನು ಪೂಜಿಸಲಾಗುತ್ತದೆ. ಬ್ರಿಟಿಷರ ಕಾಲದಿಂದಲೇ ಕೊಡಗಿನ ಮೂಲನಿವಾಸಿಗಳಿಗೆ ಬಂದೂಕು ಹೊಂದುವ ವಿಶೇಷ ಅಧಿಕಾರವಿರುವುದು ಈ ಹಬ್ಬದ ವಿಶೇಷ. ಇದು ಕೊಡವರ ಸಾಂಸ್ಕೃತಿಕ ಹೆಗ್ಗಳಿಕೆ ಆಗಿದೆ. ಈ ಹಬ್ಬದ ಚಿತ್ರನೋಟ ಇಲ್ಲಿದೆ ನೋಡಿ.

Gopal AS
| Edited By: |

Updated on: Dec 18, 2025 | 5:02 PM

Share
ಕಾಫಿ ಕಣಿವೆ, ಹಾಕಿ ತವರು, ಮಂಜಿನ ನಗರಿ ಎಂದೆಲ್ಲಾ ಫೇಮಸ್ ಆಗಿರುವ ಕೊಡಗು ಜಿಲ್ಲೆಯ ಮತ್ತೊಂದು ಹೆಗ್ಗಳಿಕೆ ಅಂದರೆ ಕೋವಿ ಹಬ್ಬ. ಈ ದಕ್ಷಿಣದ ಕಾಶ್ಮೀರದ ಮೂಲನಿವಾಸಿಗಳು ಕೋವಿ ಪ್ರಿಯರು. ಹಾಗಾಗಿ ಇಲ್ಲಿ ಪ್ರತಿ ವರ್ಷ ಕೋವಿ ಹಬ್ಬ ಮಾಡಲಾಗುತ್ತದೆ. ಆ ಹಬ್ಬದ ಒಂದು ಝಲಕ್​ ಇಲ್ಲಿದೆ ನೋಡಿ.

1 / 6
ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಂದೂಕನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಕೊಡಗು ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡು ಸಮೀಪ ಗನ್ ಕಾರ್ನಿವಲ್ ಆಯೋಜಿಸಲಾಗಿತ್ತು.

2 / 6
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದ ಜನರು ತಮ್ಮ ವಿವಿಧ ಕೋವಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಡಗಿನ ಮದುವೆಗಳಲ್ಲಿ ಕಂಡು ಬರು ಸಾಂಪ್ರದಾಯಿಕ ಬಾಳೆ ಕಡಿಯುವ ಪದ್ಧತಿ ಆಚರಿಸಿ ಸಂಭ್ರಮಿಸಿದರು. 

3 / 6
ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಕರು. ಇವರ ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ನಂಟು ಹೊಂದಿರುತ್ತವೆ. ವಾರದ ಹಿಂದಷ್ಟೇ ಹುತ್ತರಿ ಹಬ್ಬ ಕೂಡ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸುವ ಮೂಲಕ ಹಬ್ಬ ಆಚರಿಸುತ್ತಾರೆ.

4 / 6
ಬಂದೂಕನ್ನು ಬರೀ ಪೂಜಿಸುವುದಷ್ಟೇ ಅಲ್ಲದೆ, ತೆಂಗಿನ ಕಾಯಿಗೆ ಗುಂಡು ಹೊಡೆದು ಬಹುಮಾನ ಗೆದ್ದು ಸಂಭ್ರಮಿಸಿದರು. ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಗುರಿ ಇಟ್ಟು ಗುಂಡು ಹೊಡೆದು ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.

5 / 6
ಇನ್ನು ವಿಶೇಷ ಅಂದರೆ ಇಡೀ ದೇಶದಲ್ಲಿ ಕೊಡಗಿನ ಪ್ರತಿಯೊಬ್ಬ ಮೂಲನಿವಾಸಿಗಳಿಗೆ ಮಾತ್ರ ಬಂದೂಕು ಹೊಂದುವ ವಿಶೇಷ ಅಧಿಕಾರ ಮತ್ತು ಹಕ್ಕನ್ನು ನೀಡಲಾಗಿದೆ. ಹಿಂದೆ ಬ್ರಿಟಿಷರ ಅವಧಿಯಲ್ಲಿ ಈ ಹಕ್ಕು ಕೊಡಗಿನ ಜನರಿಗೆ ನಿಡಲಾಗಿದ್ದು, ಅದು ಇಂದಿಗೂ ಮುಂದುವರೆದಿರುವುದು ವಿಶೇಷ.

6 / 6
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ