AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಡೌನ್​ನಲ್ಲಿ ಕೊಳೆಯುತ್ತಿದೆ ಕೋಮುಲ್​ನ ಹಾಲಿನ ಪೌಡರ್ ಮತ್ತು ಬೆಣ್ಣೆ

ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮದ ರಾಜ್ಯದಲ್ಲಿ ಹೆಸರು ಮಾಡಿದೆ. ಕೋಮುಲ್ ಹಾಲು ಒಕ್ಕೂಟದಲ್ಲಿ 2100 ಟನ್ ಹಾಲಿನ ಪುಡಿ ಮತ್ತು 800 ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದ್ದು, 80 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಹಾಲು ಉತ್ಪಾದರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Feb 02, 2025 | 8:24 AM

Share
ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವನ್ನು ನಂಬಿ‌‌ ಸಾವಿರಾರು ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ.  ಎಂತಹ ಕಷ್ಟದ ಸಮಯದಲ್ಲೂ ಹೈನೋದ್ಯಮ ಜಿಲ್ಲೆಯ ರೈತರ ಕೈ ಬಿಟ್ಟಿಲ್ಲ. ಕೋಲಾರ ಹೈನೋದ್ಯಮ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ, ಸದ್ಯ ಹಾಲು ಒಕ್ಕೂಟಗಳು ನಷ್ಟದತ್ತ ಸಾಗುತ್ತಿವೆ ಎಂದು ಹೇಳಲಾಗುತ್ತಿದೆ.

1 / 8
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಿ ಸುಮಾರು 1200ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಲಕ್ಷಾಂತರ ಕುಟುಂಬಗಳು ಹೈನೋದ್ಯಮದ ಮೇಲೆ ಅವಲಂಭಿತವಾಗಿದ್ದು ಜಿಲ್ಲೆಯಲ್ಲಿ ನಿತ್ಯ ಸುಮಾರು 6 ಲಕ್ಷ ಲೀಟರ್​ಗೂ ಹೆಚ್ಚು ಹಾಲು ಉತ್ಪಾದನೆ ಯಾಗುತ್ತಿದೆ. ಹೀಗಿರುವಾಗ, ಕೋಮುಲ್​ನ​​​ ಹಾಲಿನ ಪೌಡರ್ ಹಾಗೂ ಬೆಣ್ಣೆ ಮಾರಾಟವಾಗದೆ ಟನ್​ ಗಟ್ಟಲೆ ಕೆಎಂಎಫ್​ನ ಗೋಡೋನ್​ನಲ್ಲಿ ಕೊಳೆಯುತ್ತಿದೆ.

2 / 8
ಕೋಮುಲ್​ ಕಳೆದ 8 ತಿಂಗಳಿಂದ ನಷ್ಟಕ್ಕೆ ಸಿಲಿಕಿದೆ. ಇದರ ಬೆನ್ನಲ್ಲೇ ಕೋಮುಲ್​ನ​ 2100 ಟನ್ ಹಾಲಿನ ಪೌಡರ್ ಹಾಗೂ 800 ಟನ್ ಬೆಣ್ಣೆ ಮಾರಾಟವಾಗಿಲ್ಲ. 2100 ಟನ್ ಹಾಲಿನ ಪೌಡರ್​ನ ಒಟ್ಟು ಮೌಲ್ಯ 50 ಕೋಟಿ‌ ಆಗಿದ್ದು, 800 ಟನ್ ಬೆಣ್ಣೆಯ ಮೌಲ್ಯ ಬರೋಬ್ಬರಿ 30 ಕೋಟಿಯಷ್ಟಿದೆ. ಸುಮಾರು 80 ಕೋಟಿಯಷ್ಟು ಮೌಲ್ಯದ ಹಾಲಿಪುಡಿ ಮತ್ತು ಬೆಣ್ಣೆ ಮಾರಾಟವಾಗದೆ ಇರುವುದು ಕೋಮುಲ್​ ಆಡಳಿತ ಮಂಡಳಿಯ ಚಿಂತೆಗೆ ಕಾರಣವಾಗಿದೆ. ಇದು ಕೇವಲ ಕೋಮುಲ್​ನ ಕಥೆಯಲ್ಲ, ರಾಜ್ಯದ ಎಲ್ಲ ಒಕ್ಕೂಟದಲ್ಲೂ ಇದೇ ಪರಿಸ್ಥಿತಿ ಇದೆ.

3 / 8
ಕೋಲಾರ ಜಿಲ್ಲೆಯಲ್ಲಿ ನಿತ್ಯ ಸರಿ ಸುಮಾರು ಆರು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಾಸರಿ 11 ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಉತ್ಪಾದನೆಯಾಗುತ್ತಿತ್ತು. ಇಂಥಹ ಸಂದರ್ಭದಲ್ಲಿ ಒಕ್ಕೂಟಕ್ಕೆ ಬಂದ ನೂರರಷ್ಟು ಹಾಲು ಮಾರಾಟವಾಗುತ್ತಿರಲಿಲ್ಲ.

4 / 8
ಹಾಲು, ಮೊಸಲು, ಬೆಣ್ಣೆ, ಹಾಗೂ ಯುಹೆಚ್​ಟಿ ಮಿಲ್ಕ್​ಗೆ ಹೋಗಿ ಸರಿಸುಮಾರು ಒಂದುವರೆ ಲಕ್ಷ ಲೀಟರ್​ನಷ್ಟು ಹಾಲು ಉಳಿಯುತ್ತಿತ್ತು. ಈ ವೇಳೆ ಒಕ್ಕೂಟದ ನಷ್ಟದ ಸುಳಿಗೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಉಳಿದ ಹಾಲನ್ನು ಪೌಡರ್​ ಮಾಡಲಾಗುತ್ತಿತ್ತು. ಆದರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ಪೌಡರ್​ಗೆ ಬೇಡಿಕೆ ಇಲ್ಲದೆ ಕಾರಣ ಪೌಡರ್ ಗೋಡೌನ್​ನಲ್ಲಿ ಹಾಗೆ ಉಳಿದಿದೆ.

5 / 8
ಒಂದು ಕೆ.ಜಿ ಹಾಲಿನ ಪೌಡರ್​ ತಯಾರಿಸಲು 240 ರೂಪಾಯಿ ಖರ್ಚು ಆಗುತ್ತದೆ. ಉತ್ಪಾದನೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು, ಬೆಣ್ಣೆಯಿಂದ ತುಪ್ಪ ತಯಾರಿಸುವುದು ಕೂಡ ಒಕ್ಕೂಟಕ್ಕೆ ದುಬಾರಿಯಾಗಿದೆ.

6 / 8
ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕುತ್ತಿರುವ ಬೆನ್ನಲ್ಲೇ ಸರ್ಕಾರ ಈಗಾಗಲೇ ಎರಡು ಬಾರಿ ರೈತರ  ಹಾಲಿನ ದರ ಏರಿಕೆ ಮಾಡಿದೆ. ಜೊತೆಗೆ, ಸರ್ಕಾರ ಕಳೆದ 5 ತಿಂಗಳಿನಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿಲ್ಲ. ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 44 ಕೋಟಿ ರೂಪಾಯಿ ಪ್ರೋತ್ಸಾಹ ಧನ ಬಾಕಿ ಬರಬೇಕಾಗಿದೆ.

7 / 8
ಸರ್ಕಾರ ಕೂಡಲೇ ಹಾಲು ಒಕ್ಕೂಟಗಳನ್ನು ನಷ್ಟದ ಸುಳಿಯಿಂದ ಪಾರು ಮಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುವುದು ಹಾಲು ಉತ್ಪಾದಕರ ಆಗ್ರಹವಾಗಿದೆ.

8 / 8
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ

ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ