- Kannada News Photo gallery Kolaramma and Mysore Chamundeshwari Ashada Shukravara Special Pooja photos
2ನೇ ಆಷಾಡ ಶುಕ್ರವಾರ: ಚಾಮುಂಡೇಶ್ವರಿ ಜತೆಗೆ ಕೋಲಾರಮ್ಮನ ಅಲಂಕಾರ ನೋಡಿ
ಎರಡನೇ ಆಷಾಢ ಶುಕ್ರವಾರದಂದು ಕೋಲಾರದ ಕೋಲಾರಮ್ಮ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಕೋಲಾರಮ್ಮ ದೇವಸ್ಥಾನಕ್ಕೆ ಮಾವಿನ ಹಣ್ಣಿನಿಂದ ಅಲಂಕಾರ ಮಾಡಲಾಯಿತು. ಸಾವಿರಾರು ಭಕ್ತರು ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿ ಮತ್ತು ಕೋಲಾರದಲ್ಲಿ ಕೋಲಾರಮ್ಮನ ದೇವರ ದರ್ಶನ ಪಡೆದು ಪುನೀತರಾದರು.
Updated on:Jul 04, 2025 | 6:43 PM

ಎರಡನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಕೋಲಾರದ ಅಧಿದೇವತೆ ಹಾಗೂ ಕೋಲಾರ ಜಿಲ್ಲೆಯ ಜನರ ಆರಾಧ್ಯ ಶಕ್ತಿ ದೇವತೆ ಕೋಲಾರಮ್ಮ ದೇವರಿಗೆ ವಿಶೇಷ ಅಲಂಕಾರ ವಿಶೇಷ ಪೂಜೆ ಮಾಡಲಾಯಿತು. ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಕೋಲಾರಮ್ಮ ದೇವಾಲಯಕ್ಕೆ ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತ್ತು.

ಇಂದು ವಿಶೇಷವಾಗಿ ದೇವರಿಗೆ ಹಾಗೂ ದೇವಾಲಯಕ್ಕೆ ಮಾವಿನ ಹಣ್ಣಿನ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ದೇವಿಯ ಉತ್ಸವ ಮೂರ್ತಿಗೆ ಮಾವಿನ ಹಣ್ಣಿನ ಅಲಂಕಾರ ನೋಡುಗರನ್ನು ಆಕರ್ಶಿಸುವಂತಿತ್ತು. ಇದು ಮಾವಿನ ಶಕೆ ಆಗಿರುವ ಕಾರಣ ಅದರಲ್ಲೂ ರಾಜ್ಯದ ಮಾವಿನ ತವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ವಿಶೇಷವಾದ ಬಗೆ ಬಗೆಯ ಮಾವಿನ ಹಣ್ಣಿನಿಂದ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಕೋಲಾರ ಪಟ್ಟಣದಲ್ಲಿರುವ ಒಂದು ಕೋಲಾರಮ್ಮ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ ಮತ್ತು ಚೋಳರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದೆ. ಕೋಲಾರಮ್ಮ ದೇವಿಯ ಗರ್ಭಗುಡಿಯಲ್ಲಿ ಸಪ್ತಮಾತೃಕೆಯರ ಮತ್ತು ಅಷ್ಟಭುಜಗಳ ಮಹಿಷಾಸುರಮರ್ದಿನಿಯ ವಿಗ್ರಹವಿದೆ.

ಆಷಾಢ ಮಾಸ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಆಷಾಢ ಮಾಸದ ಎರಡನೇ ಶುಕ್ರವಾರವೂ ಕೂಡ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿತು. ತಾಯಿ ಚಾಮುಂಡೇಶ್ವರಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.

ಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು. ಆಷಾಢ ಮಾಸ ಎರಡನೇ ಶುಕ್ರವಾರ ಹಿನ್ನೆಲೆಯಲ್ಲಿ ದೇಗುಲಕ್ಕೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಹೂವು ಬಳೆ ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು.
Published On - 6:41 pm, Fri, 4 July 25




