Updated on: Aug 03, 2022 | 5:24 PM
ನಟಿ ಖುಷ್ಬೂ ಸುಂದರ್ಗೆ ಈಗ 51 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಯುವತಿಯರನ್ನು ನಾಚಿಸುವಂತೆ ಇದ್ದಾರೆ. ಅವರನ್ನು ಕಂಡರೆ ಫ್ಯಾನ್ಸ್ಗೆ ಎಲ್ಲಿಲ್ಲದ ಪ್ರೀತಿ. ಈಗ ಅವರ ತಲೆ ಕೂದಲ ಮೇಲೆ ಎಲ್ಲರೂ ಕಣ್ಣು ಹಾಕಿದ್ದಾರೆ.
ಖುಷ್ಬೂ ಅವರು ನಟಿ ಹಾಗೂ ರಾಜಕಾರಣಿ. ಅವರು ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಅವರು ಇನ್ನೂ ಯಂಗ್ ಆಗಿ ಕಾಣಿಸುತ್ತಿದ್ದಾರೆ.
ಇತ್ತೀಚೆಗೆ ಖುಷ್ಬೂ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ತಲೆ ಕೂದಲ ಬಿಚ್ಚಿಕೊಂಡಿದ್ದಾರೆ. ಇದಕ್ಕೆ ಅವರು ಒಂದು ಕ್ಯಾಪ್ಶನ್ ನೀಡಿದ್ದಾರೆ.
‘ಜನರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ಮೊದಲು ಕೂದಲು ನೋಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಇದು ಹೇಗೆ ಸಾಧ್ಯ? ದಿನ ಕಳೆದಂತೆ ನೀವು ಮತ್ತೂ ಸುಂದರವಾಗಿ ಕಾಣುತ್ತಿದ್ದೀರಿ’ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ನಿಮ್ಮ ಕೂದಲು ನಿಜಕ್ಕೂ ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ.