ಲಾಲ್‌ಬಾಗ್​​​ ಫ್ಲವರ್​​ ಶೋಗೆ ಮನಸೋತ ಸಿಟಿ ಮಂದಿ: 9.5 ಲಕ್ಷ ಜನ ಭೇಟಿ; ನಾಳೆ ಕೊನೆ ದಿನ

Edited By:

Updated on: Aug 16, 2026 | 8:54 PM

Lalbagh Flower Show: ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ನಡೆಯುತ್ತಿರುವ 220ನೇ ಫಲ ಪುಷ್ಪ ಪ್ರದರ್ಶನವು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. 11 ದಿನದಲ್ಲಿ 9.5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, 3 ಕೋಟಿ ರೂ ಆದಾಯ ಗಳಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದು, ಗಂಗಾ ಸಾಮ್ರಾಜ್ಯದ ಇತಿಹಾಸವನ್ನು ಹೂವಿನ ಚಿತ್ತಾರಗಳಲ್ಲಿ ಕಣ್ತುಂಬಿಕೊಂಡರು.

1 / 5
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವೆಂದರೆ ಬೆಂಗಳೂರಿಗರಿಗೆ ಮೊದಲು ನೆನಪಾಗುವುದೇ ಸಸ್ಯಕಾಶಿ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನ. ಬಣ್ಣ ಬಣ್ಣದ ಹೂವುಗಳ ಸೌಂದರ್ಯ, ಗಾಜಿನ ಮನೆಯೊಳಗೆ ಕಂಗೊಳಿಸುತ್ತಿರುವ ಗಂಗ ಸಾಮ್ರಾಜ್ಯದ ಗತವೈಭವದ ಇತಿಹಾಸವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದೆ. ನಿರೀಕ್ಷೆಗೂ ಮೀರಿದ ಅಭೂತಪೂರ್ವ ಜನಮೆಚ್ಚುಗೆಗೆ ಪಾತ್ರವಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವೆಂದರೆ ಬೆಂಗಳೂರಿಗರಿಗೆ ಮೊದಲು ನೆನಪಾಗುವುದೇ ಸಸ್ಯಕಾಶಿ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನ. ಬಣ್ಣ ಬಣ್ಣದ ಹೂವುಗಳ ಸೌಂದರ್ಯ, ಗಾಜಿನ ಮನೆಯೊಳಗೆ ಕಂಗೊಳಿಸುತ್ತಿರುವ ಗಂಗ ಸಾಮ್ರಾಜ್ಯದ ಗತವೈಭವದ ಇತಿಹಾಸವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದೆ. ನಿರೀಕ್ಷೆಗೂ ಮೀರಿದ ಅಭೂತಪೂರ್ವ ಜನಮೆಚ್ಚುಗೆಗೆ ಪಾತ್ರವಾಗಿದೆ.

2 / 5

ಕಳೆದ 11 ದಿನಗಳಲ್ಲಿ ಬರೋಬ್ಬರಿ 9.5 ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋಗೆ ಭೇಟಿ ನೀಡಿದ್ದಾರೆ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ರಜಾದಿನದಂದು ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಸಂಭ್ರಮಿಸಿದರು.

3 / 5

ಸ್ವಾತಂತ್ರ್ಯ ದಿನಾಚರಣೆ ಒಂದೇ ದಿನ ದಾಖಲೆಯ 1.05 ಕೋಟಿ ರೂ ಆದಾಯ ಸಂಗ್ರಹವಾಗಿದೆ. ಇನ್ನು ಇಡೀ ಪ್ರದರ್ಶನದಿಂದ ಒಟ್ಟಾರೆಯಾಗಿ ಇದುವರೆಗೆ 3 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ.

4 / 5

ಕುಟುಂಬ ಸಮೇತರಾಗಿ ಆಗಮಿಸಿದ ಜನರು ಗಾಜಿನ ಮನೆಯಲ್ಲಿ ಅರಳಿನಿಂತ ಪುಷ್ಪಲೋಕವನ್ನು ಕಂಡು ಮಂತ್ರಮುಗ್ಧರಾದರು. ಭಾನುವಾರದ ರಜಾ ದಿನವಾದ ಇಂದೂ ಕೂಡ ಜನಜಂಗುಳಿ ಮುಗಿಬಿದ್ದಿದ್ದು, ನಿಸರ್ಗ ಹಾಗೂ ಇತಿಹಾಸದ ಸಮ್ಮಿಲನಕ್ಕೆ ಸಾರ್ವಜನಿಕರು ಮನಸೋತಿದ್ದಾರೆ.

5 / 5

ದಿನನಿತ್ಯದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸಂಭ್ರಮವನ್ನು ಕಂಡುಕೊಳ್ಳುತ್ತಿರುವುದು ವಿಶೇಷವಾಗಿತ್ತು. ನಗರದ ಪ್ರಮುಖ ಆಕರ್ಷಣೆಯಾಗಿ ಮನಸೆಳೆದ ಈ ಸುಂದರ ಫಲಪುಷ್ಪ ಪ್ರದರ್ಶನಕ್ಕೆ ನಾಳೆ (ಸೋಮವಾರ) ತೆರೆಬೀಳಲಿದೆ.

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us