LIC Kanyadan Policy: ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಕೇವಲ 121 ರೂ. ಪಾವತಿಸಿ 27 ಲಕ್ಷ ಗಳಿಸಿ!

ಭಾರತೀಯ ಜೀವ ವಿಮಾ ನಿಗಮದ (LIC) ಅನೇಕ ಪಾಲಿಸಿಗಳು ಗುರಿ ಆಧಾರಿತವಾಗಿವೆ. ಜೀವ ವಿಮೆಯ ಜತೆಗೆ ಉತ್ತಮ ಗಳಿಕೆ ತಂದುಕೊಡುವ ಅನೇಕ ಪಾಲಿಸಿಗಳನ್ನು ಎಲ್​ಐಸಿ ಪರಿಚಯಿಸಿದೆ. ಅವುಗಳಲ್ಲಿ ಎಲ್​ಐಸಿ ಕನ್ಯಾದಾನ ಪಾಲಿಸಿಯೂ ಒಂದಾಗಿದೆ. ಈ ಪಾಲಿಸಿಯ ವಿವರ ಇಲ್ಲಿದೆ.

Ganapathi Sharma
|

Updated on: Feb 13, 2023 | 4:24 PM

LIC Kanyadan Policy Pay Rupees 121 get 27 lakh details here in Kannada

ಮದುವೆಯ ಖರ್ಚಿಗಾಗಿ ಉಳಿತಾಯ ಮಾಡುವ ಉದ್ದೇಶದೊಂದಿಗೆ ಎಲ್​ಐಸಿ ಕನ್ಯಾದಾನ ಪಾಲಿಸಿಯನ್ನು ಪರಿಚಯಿಸಿದೆ. ಭವಿಷ್ಯದಲ್ಲಿ ಮಗಳ ಮದುವೆ ಮತ್ತು ಶಿಕ್ಷಣದ ವೆಚ್ಚಕ್ಕೆ ಉಳಿತಾಯ ಮಾಡಲು ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

1 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ಅವಧಿಯ ಬಳಿಕ 27 ಕ್ಷ ರೂ. ಗಳಿಸಲು ಅವಕಾಶವಿದೆ. ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ವಿಧಾನ ಹೇಗೆ? ಎಷ್ಟು ಮೊತ್ತದ ಕಂತು ಪಾವತಿಸಬೇಕು? ಇಲ್ಲಿದೆ ಮಾಹಿತಿ.

2 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿ 25 ವರ್ಷಗಳ ಅವಧಿಯದ್ದಾಗಿದೆ. ತಿಂಗಳಿಗೆ 3,600 ರೂ. ಪಾವತಿಸಬೇಕಾಗುತ್ತದೆ. ದಿನದ ಲೆಕ್ಕ ಹಾಕಿದರೆ 121 ರೂ.ನಂತರ 22 ವರ್ಷಗಳ ಕಾಲ ಪಾವತಿ ಮಾಡಬೇಕಾಗುತ್ತದೆ.

3 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಗೆ ಲಾಕ್ ಇನ್ ಅವಧಿ ಇದೆ. 25 ವರ್ಷಗಳ ಬಳಿಕ 27 ಲಕ್ಷ ರೂ. ದೊರೆಯಲಿದೆ.

4 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯ ಕನಿಷ್ಠ ಟರ್ಮ್ ಅವಧಿ 13 ವರ್ಷಗಳಾಗಿವೆ. ಗರಿಷ್ಠ 25 ವರ್ಷಗಳಾಗಿವೆ. ಕನಿಷ್ಠ ಮೊತ್ತ 1 ಲಕ್ಷ ರೂ. ಆಗಿದೆ.

5 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿ ಮಾಡಿಸಬೇಕಿದ್ದರೆ ಹೆಣ್ಣುಮಗುವಿನ ತಂದೆಯ ವಯಸ್ಸು 50 ವರ್ಷ ಮೀರಿರಬಾರದು. ಹೆಣ್ಣು ಮಗುವಿಗೆ ಕನಿಷ್ಠ 1 ವರ್ಷ ವಯಸ್ಸಾಗಿರಬೇಕು. ಮಗುವಿನ ವಯಸ್ಸಿನ ಆಧಾರದಲ್ಲಿ ಟರ್ಮ್​ ಆಯ್ಕೆ ಮಾಡಿಕೊಳ್ಳಬಹುದು.

6 / 7
LIC Kanyadan Policy Pay Rupees 121 get 27 lakh details here in Kannada

ಎಲ್​ಐಸಿ ಕನ್ಯಾದಾನ ಪಾಲಿಸಿಯಲ್ಲಿ ಮಾಡಿರುವ ಹೂಡಿಕೆಯ ಮೊತ್ತವನ್ನು ಹೆಣ್ಣು ಮಗುವಿಗೆ 25 ವರ್ಷಗಳಾದಾಗ ಆಕೆಗೆ ನೀಡಲಾಗುತ್ತದೆ.

7 / 7
Follow us