LIC Kanyadan Policy: ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಕೇವಲ 121 ರೂ. ಪಾವತಿಸಿ 27 ಲಕ್ಷ ಗಳಿಸಿ!
ಭಾರತೀಯ ಜೀವ ವಿಮಾ ನಿಗಮದ (LIC) ಅನೇಕ ಪಾಲಿಸಿಗಳು ಗುರಿ ಆಧಾರಿತವಾಗಿವೆ. ಜೀವ ವಿಮೆಯ ಜತೆಗೆ ಉತ್ತಮ ಗಳಿಕೆ ತಂದುಕೊಡುವ ಅನೇಕ ಪಾಲಿಸಿಗಳನ್ನು ಎಲ್ಐಸಿ ಪರಿಚಯಿಸಿದೆ. ಅವುಗಳಲ್ಲಿ ಎಲ್ಐಸಿ ಕನ್ಯಾದಾನ ಪಾಲಿಸಿಯೂ ಒಂದಾಗಿದೆ. ಈ ಪಾಲಿಸಿಯ ವಿವರ ಇಲ್ಲಿದೆ.
Updated on: Feb 13, 2023 | 4:24 PM

ಮದುವೆಯ ಖರ್ಚಿಗಾಗಿ ಉಳಿತಾಯ ಮಾಡುವ ಉದ್ದೇಶದೊಂದಿಗೆ ಎಲ್ಐಸಿ ಕನ್ಯಾದಾನ ಪಾಲಿಸಿಯನ್ನು ಪರಿಚಯಿಸಿದೆ. ಭವಿಷ್ಯದಲ್ಲಿ ಮಗಳ ಮದುವೆ ಮತ್ತು ಶಿಕ್ಷಣದ ವೆಚ್ಚಕ್ಕೆ ಉಳಿತಾಯ ಮಾಡಲು ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ಅವಧಿಯ ಬಳಿಕ 27 ಕ್ಷ ರೂ. ಗಳಿಸಲು ಅವಕಾಶವಿದೆ. ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವ ವಿಧಾನ ಹೇಗೆ? ಎಷ್ಟು ಮೊತ್ತದ ಕಂತು ಪಾವತಿಸಬೇಕು? ಇಲ್ಲಿದೆ ಮಾಹಿತಿ.

ಎಲ್ಐಸಿ ಕನ್ಯಾದಾನ ಪಾಲಿಸಿ 25 ವರ್ಷಗಳ ಅವಧಿಯದ್ದಾಗಿದೆ. ತಿಂಗಳಿಗೆ 3,600 ರೂ. ಪಾವತಿಸಬೇಕಾಗುತ್ತದೆ. ದಿನದ ಲೆಕ್ಕ ಹಾಕಿದರೆ 121 ರೂ.ನಂತರ 22 ವರ್ಷಗಳ ಕಾಲ ಪಾವತಿ ಮಾಡಬೇಕಾಗುತ್ತದೆ.

ಎಲ್ಐಸಿ ಕನ್ಯಾದಾನ ಪಾಲಿಸಿಗೆ ಲಾಕ್ ಇನ್ ಅವಧಿ ಇದೆ. 25 ವರ್ಷಗಳ ಬಳಿಕ 27 ಲಕ್ಷ ರೂ. ದೊರೆಯಲಿದೆ.

ಎಲ್ಐಸಿ ಕನ್ಯಾದಾನ ಪಾಲಿಸಿಯ ಕನಿಷ್ಠ ಟರ್ಮ್ ಅವಧಿ 13 ವರ್ಷಗಳಾಗಿವೆ. ಗರಿಷ್ಠ 25 ವರ್ಷಗಳಾಗಿವೆ. ಕನಿಷ್ಠ ಮೊತ್ತ 1 ಲಕ್ಷ ರೂ. ಆಗಿದೆ.

ಎಲ್ಐಸಿ ಕನ್ಯಾದಾನ ಪಾಲಿಸಿ ಮಾಡಿಸಬೇಕಿದ್ದರೆ ಹೆಣ್ಣುಮಗುವಿನ ತಂದೆಯ ವಯಸ್ಸು 50 ವರ್ಷ ಮೀರಿರಬಾರದು. ಹೆಣ್ಣು ಮಗುವಿಗೆ ಕನಿಷ್ಠ 1 ವರ್ಷ ವಯಸ್ಸಾಗಿರಬೇಕು. ಮಗುವಿನ ವಯಸ್ಸಿನ ಆಧಾರದಲ್ಲಿ ಟರ್ಮ್ ಆಯ್ಕೆ ಮಾಡಿಕೊಳ್ಳಬಹುದು.

ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಮಾಡಿರುವ ಹೂಡಿಕೆಯ ಮೊತ್ತವನ್ನು ಹೆಣ್ಣು ಮಗುವಿಗೆ 25 ವರ್ಷಗಳಾದಾಗ ಆಕೆಗೆ ನೀಡಲಾಗುತ್ತದೆ.

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.
Read More



