Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi: ಒಂದೇ ಬಾರಿಗೆ ಬರೋಬ್ಬರಿ 35 ಚಿನ್ನದ ಐಫೋನ್‌ಗಳನ್ನು ಖರೀದಿಸಿದ ಮೆಸ್ಸಿ! ಕಾರಣವೇನು ಗೊತ್ತಾ?

Lionel Messi: ವಿಶ್ವ ದಾಖಲೆಯನ್ನು ಇನ್ನಷ್ಟು ಸ್ಮರಣೀಯವಾಗಿಸಲು ಮುಂದಾಗಿರುವ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಮುಂದಾಗಿದ್ದಾರೆ.

ಪೃಥ್ವಿಶಂಕರ
|

Updated on:Mar 02, 2023 | 11:01 AM

2022 ರ ಕತಾರ್‌ನಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಅರ್ಜೆಂಟೀನಾ ತಂಡ  ಫಿಫಾ ವಿಶ್ವಕಪ್​ನಲ್ಲಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಈ ವಿಶ್ವ ದಾಖಲೆಯನ್ನು ಇನ್ನಷ್ಟು ಸ್ಮರಣೀಯವಾಗಿಸಲು ಮುಂದಾಗಿರುವ ಅರ್ಜೆಂಟೀನಾ ತಂಡನಾಯಕ ಲಿಯೋನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಮುಂದಾಗಿದ್ದಾರೆ.

1 / 6
ದಿ ಸನ್‌ ವರದಿಯ ಪ್ರಕಾರ, ಮೆಸ್ಸಿ ತನ್ನ  ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ಚಿನ್ನದ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.ಪ್ರತಿಯೊಂದು ಚಿನ್ನದ ಈ ಐಫೋನ್​ಗಳ ಬೆಲೆ ಅಂದಾಜು ರೂ. 1.73 ಕೋಟಿ ಎಂದು ಹೇಳಲಾಗುತ್ತಿದ್ದು, ಈ ಐಫೋನ್​ಗಳನ್ನು 24-ಕ್ಯಾರೆಟ್ ಚಿನ್ನದಲ್ಲಿ ಮಾಡಲಾಗಿದೆ.

2 / 6
ಹಾಗೆಯೇ ಪ್ರತಿಯೊಂದು ಐಫೋನ್​ಗಳ ಮೇಲೆಯೂ ತಂಡದ ಆಟಗಾರನ ಹೆಸರು, ಆತನ ಜೆರ್ಸಿ ನಂಬರ್, ಮತ್ತು ಅರ್ಜೆಂಟೀನಾದ ಲೋಗೋವನ್ನು ಮುದ್ರಿಸಲಾಗಿದೆ.

3 / 6
ಈ ಬಗ್ಗೆ ಮಾಹಿತಿ ನೀಡಿರುವ ಐಡಿಸೈನ್ ಗೋಲ್ಡ್​ನ ಸಿಇಓ ಬೆನ್, ಮೆಸ್ಸಿ, ವಿಶ್ವಕಪ್ ಫೈನಲ್‌ ಮುಗಿದ ಒಂದೆರಡು ತಿಂಗಳ ನಂತರ ನಮ್ಮ ಬಳಿಗೆ ಬಂದು, ಈ ಅದ್ಭುತ ಗೆಲುವನ್ನು ಆಚರಿಸಲು ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡುವುದಾಗಿ ಹೇಳಿಕೊಂಡರು.ವಾಚ್‌ಗಳನ್ನು ಉಡುಗೊರೆಯಾಗಿ ನೀಡುವುದಕ್ಕೆ ಮೆಸ್ಸಿ ಒಲ್ಲೆ ಎಂದರು. ಆದ್ದರಿಂದ, ನಾನು ಪ್ರತಿಯೊಬ್ಬ ಆಟಗಾರನ ಹೆಸರನ್ನು ಕೆತ್ತಲಾದ ಚಿನ್ನದ ಐಫೋನ್‌ಗಳನ್ನು ನೀಡಬಹುದು ಎಂಬ ಉಪಾಯ ನೀಡಿದೆ. ಕೂಡಲೇ ಮೆಸ್ಸಿ ಇದನ್ನು ಒಪ್ಪಿಕೊಂಡರು ಎಂದಿದ್ದಾರೆ.

4 / 6
ಪೆನಾಲ್ಟಿಯಲ್ಲಿ 4-2 ಅಂತರದಲ್ಲಿ  ಫ್ರಾನ್ಸ್ ತಂಡವನ್ನು ಸೋಲಿಸಿದ ಅರ್ಜೆಂಟೀನಾ ತನ್ನ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಇತ್ತ ನಾಯಕನಾಗಿ ಲಿಯೋನೆಲ್ ಮೆಸ್ಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಸಾಧನೆ ಕೂಡ ಮಾಡಿದರು.

5 / 6
ಅರ್ಜೆಂಟೀನಾದ ವಿಶ್ವಕಪ್ ವಿಜೇತ ತಂಡ- ಎಮಿ ಮಾರ್ಟಿನೆಜ್, ಫ್ರಾಂಕೊ ಅರ್ಮಾನಿ, ಗೆರೊನಿಮೊ ರುಲ್ಲಿ, ಮಾರ್ಕೋಸ್ ಅಕುನಾ, ಜುವಾನ್ ಫಾಯ್ತ್, ಲಿಸಾಂಡ್ರೊ ಮಾರ್ಟಿನೆಜ್, ನಿಕೋಲಸ್ ಟ್ಯಾಗ್ಲಿಯಾಫಿಕೊ, ಕ್ರಿಸ್ಟಿಯನ್ ರೊಮೆರೊ, ನಿಕೋಲಸ್ ಒಟಮೆಂಡಿ, ನಹುಯೆಲ್ ಮೊಲಿನಾ, ಗೊನ್ಜಾಲೊ ಮೊಂಟಿಯೆಲ್, ಲೆಗೊರ್ನ್ ಪೆಜ್ಜೆಲ್, ಆಂರೊ ಜರ್ಮನ್ ಪೆಜ್ಜೆಲ್, ಆಂರೊ ಜರ್ಮನ್ ಪೆಜ್ಜೆಲ್ಲಾ ಡಿ ಪಾಲ್, ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್, ಎಂಜೊ ಫೆರ್ನಾಂಡಿಸ್, ಎಕ್ಸಿಕ್ವಿಯೆಲ್ ಪಲಾಸಿಯೊಸ್, ಗಿಡೋ ರೊಡ್ರಿಗಸ್, ಲಿಯೋನೆಲ್ ಮೆಸ್ಸಿ, ಲೌಟಾರೊ ಮಾರ್ಟಿನೆಜ್, ಪಾಲೊ ಡೈಬಾಲಾ, ಏಂಜೆಲ್ ಕೊರಿಯಾ, ಜೂಲಿಯನ್ ಅಲ್ವಾರೆಜ್, ಥಿಯಾಗೊ ಅಲ್ಮಾಡಾ, ಅಲೆಜಾಂಡ್ರೊ ಗೊಮೆಜ್

6 / 6

Published On - 10:58 am, Thu, 2 March 23

Follow us