ಪಕ್ಷಾಂತರ ಪರ್ವ: ಸಂಗಣ್ಣ ಕರಡಿ ಕಾಂಗ್ರೆಸ್​ಗೆ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿಗೆ, ಫೋಟೋಸ್​ ನೋಡಿ

ಪ್ರತಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಾಮಾನ್ಯ. ಈ ಬಾರಿಯ ಲೋಕಸಭೆ ಚುನಾವಣೆ ಸಮಯದಲ್ಲಿ ಒಂದಡೆ ಸಂಗಣ್ಣ ಕರಡಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್​ ಸೇರಿಕೊಂಡರೆ, ಇತ್ತ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೈ ಬಿಟ್ಟು ಕಮಲ ಪಾಳಯ ಸೇರಿಕೊಂಡಿದ್ದಾರೆ.

ವಿವೇಕ ಬಿರಾದಾರ
|

Updated on:Apr 17, 2024 | 5:28 PM

 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪಕ್ಷಾಂತರ ಜೋರಾಗಿದೆ. ಬಿಜೆಪಿಯ ಹಾಲಿ ಸಂಸದ ಕಾಂಗ್ರೆಸ್​ ಸೇರಿದ್ದರೇ, ಕಾಂಗ್ರೆಸ್​ನ ಮಾಜಿ ಶಾಸಕ ಕಮಲ ಪಾಳಯವನ್ನು ಸೇರಿಕೊಂಡಿದ್ದಾರೆ.

1 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕರಡಿ ಸಂಗಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಂಸತ್​ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

2 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಬಿಜೆಪಿ ಹೊಸಮುಖ ಡಾ. ಬಸವರಾಜ್‌ ಕ್ಯಾವಟರ್‌ ಅವರಿಗೆ ಕೊಪ್ಪಳ ಕ್ಷೇತ್ರದ ಟಿಕೆಟ್ ನೀಡಿದ್ದು, ಇದರಿಂದ ಕರಡಿ ಸಂಗಣ್ಣ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

3 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಇಂದು (ಏ.17) ಕೆಪಿಸಿಸಿ ಕಚೇರಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸಮ್ಮುಖದಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್​ ಪಡೆ ಸೇರಿಕೊಂಡರು.

4 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಬಿಜೆಪಿಯ ಕರಡಿ ಸಂಗಣ್ಣ ಕಾಂಗ್ರೆಸ್​ ಸೇರಿದರೆ ಕಾಂಗ್ರೆಸ್​ನ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರಿದ್ದಾರೆ.

5 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಕೆಲ ದಿನಗಳ ಹಿಂದೆಯಷ್ಟೇ ಅಖಂಡ ಶ್ರೀನಿವಾಸ್​ಮೂರ್ತಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

6 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

ಇಂದು (ಏ.17) ಅಖಂಡ ಶ್ರೀನಿವಾಸಮೂರ್ತಿಯವರು ಬಿಜೆಪಿ ಪಕ್ಷಕ್ಕೆ ಸೇರುವುದರಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಅನುಕೂಲ ಆಗಲಿದೆ.

7 / 8
 Lok Sabha Election 2024 News in Kannada: Karadi Sanganna Join Congress and Akhanda Srinivas Murthy joined BJP See Photos

2020ರಲ್ಲಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದಿದ್ದ ಗಲಭೆ ವೇಳೆ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು.

8 / 8

Published On - 3:03 pm, Wed, 17 April 24

Follow us