- Kannada News Photo gallery Mahesh Babu Daughter Sitara Ghattamaneni super Dance in Penny Music Video
9ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಮಗಳು ಸಿತಾರಾ; ಮಸ್ತ್ ಡ್ಯಾನ್ಸ್
ಸಿತಾರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವಳನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 6.7 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಈಗ ‘ಪೆನ್ನಿ..’ ಹಾಡಿನಿಂದ ಅವಳ ಖ್ಯಾತಿ ಮತ್ತಷ್ಟು ಹೆಚ್ಚಿದೆ.
Updated on: Mar 22, 2022 | 11:32 AM

ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಡೋದು ಸುಲಭ. ಬಾಲ ಕಲಾವಿದರಾಗಿ ಗುರುತಿಸಿಕೊಂಡ ಸೆಲೆಬ್ರಿಟಿ ಮಕ್ಕಳು, ಆ ಬಳಿಕ ಹೀರೋ/ಹೀರೋಯಿನ್ ಆಗಿ ಮಿಂಚಿದ ಉದಾಹರಣೆ ಇದೆ. ಈಗ ಮಹೇಶ್ ಬಾಬು ಮಗಳು ಸಿತಾರಾ ಕೂಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ.

ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾಳೆ. ಅವಳಿಗೆ ಕೇವಲ 9 ವರ್ಷ ವಯಸ್ಸು. ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವಳು, ಅನೇಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾಳೆ. ಈಗ ಇದೇ ಮೊದಲ ಬಾರಿಗೆ ದೊಡ್ಡ ಪರದೆಮೇಲೆ ಕಾಣಿಸಿಕೊಂಡಿದ್ದಾಳೆ.

ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ‘ಪೆನ್ನಿ..’ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಸಿತಾರಾ ಸ್ಪೆಷಲ್ ಎಂಟ್ರಿ ನೀಡಿದ್ದಾಳೆ. ಈ ಮೂಲಕ ಚಿತ್ರರಂಗಕ್ಕೆ ಅವಳು ಪರಿಚಿತಳಾಗಿದ್ದಾಳೆ.

ಸಿತಾರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವಳನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 6.7 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಈಗ ‘ಪೆನ್ನಿ..’ ಹಾಡಿನಿಂದ ಅವಳ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈ ಹಾಡು ಕೂಡ ಸಖತ್ ಹಿಟ್ ಆಗಿದೆ.

ಸಿತಾರಾ ಈ ಹಾಡಿನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಅವಳ ಸ್ಟೆಪ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವಳು ಮುಂದಿನ ದಿನಗಳಲ್ಲಿ ಹೀರೋಯಿನ್ ಆಗಿ ನಟಿಸೋದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಭಾನುವಾರ (ಮಾರ್ಚ್ 20) ರಿಲೀಸ್ ಆದ ಈ ಹಾಡು ಮಂಗಳವಾರ (ಮಾರ್ಚ್ 22) 11 ಗಂಟೆ ವೇಳೆಗೆ 1.79 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಚಿತ್ರ ಮಾರ್ಚ್ 12ರಂದು ತೆರೆಗೆ ಬರುತ್ತಿದೆ.



















