- Kannada News Photo gallery Mahesh Babu New look goes viral he posed with wife Namrata Shirodkar Entertainment News In Kannada
ಮಹೇಶ್ ಬಾಬು ಹೊಸ ಲುಕ್ಗೆ ಫ್ಯಾನ್ಸ್ ಫಿದಾ; ಹೇಗಿದೆ ನೋಡಿ ‘SSMB 29’ ಗೆಟಪ್
ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಶಿರೋಡ್ಕರ್ ‘ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿ’ಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರು ಸಿಎಂ ರೇವಂತ್ ರೆಡ್ಡಿನ ಭೇಟಿ ಮಾಡಿದ್ದಾರೆ.
Updated on: Sep 24, 2024 | 10:36 AM

ಮಹೇಶ್ ಬಾಬು ಅವರು ಸದ್ಯ SSMB 29 ಚಿತ್ರಕ್ಕಾಗಿ ರೆಡಿ ಆಗುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಹೀಗಿರುವಾಗಲೇ ಮಹೇಶ್ ಬಾಬು ಹೊಸ ಲುಕ್ ರಿವೀಲ್ ಆಗಿದೆ.

ಮಹೇಶ್ ಬಾಬು ಹಾಗೂ ಅವರ ಪತ್ನಿ ನಮ್ರತಾ ಶಿರೋಡ್ಕರ್ ‘ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿ’ಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವರು ಸಿಎಂ ರೇವಂತ್ ರೆಡ್ಡಿನ ಭೇಟಿ ಮಾಡಿದ್ದಾರೆ.

ಈ ಫೋಟೋದಲ್ಲಿ ಮಹೇಶ್ ಬಾಬು ಅವರ ಹೊಸ ಲುಕ್ ಗಮನ ಸೆಳೆದಿದೆ. ಇದರಲ್ಲಿ ಮಹೇಶ್ ಬಾಬು ಅವರ ಉದ್ದ ಕೂದಲು ಗಮನ ಸೆಳೆದಿದೆ. ಇಡೀ ಸಿನಿಮಾ ಉದ್ದಕ್ಕೂ ಅವರು ಇದೇ ರೀತಿ ಇರಲಿದ್ದಾರೆ ಎಂದು ಹೇಳಲಾಗಿದೆ.

ಮಹೇಶ್ ಬಾಬು ಅವರು ‘ಗುಂಟೂರು ಖಾರಂ’ ಬಳಿಕ ಒಂದು ಬ್ರೇಕ್ ಪಡೆದಿದ್ದಾರೆ. ಅವರು ಮುಂದಿನ ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಮಹೇಶ್ ಬಾಬು ಅವರು ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ. ಅವರು ಸಮಯ ಸಿಕ್ಕಾಗ ಕುಟುಂಬದ ಜೊತೆ ಸಮಯ ಕಳೆಯಲು ನಿರ್ಧರಿಸುತ್ತಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.