ಟಾಪ್ ಮಾತ್ರ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ ಮಲ್ಲಿಕಾ; ವೈರಲ್ ಆಯ್ತು ಬೋಲ್ಡ್ ಫೋಟೋ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Mar 08, 2022 | 5:34 PM
ಒಂದು ಹಂತದ ನಂತರ ಮಲ್ಲಿಕಾ ನಟನೆಯಿಂದ ದೂರ ಉಳಿದುಕೊಂಡರು. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ನಿತ್ಯ ಹೊಸ ಪೋಸ್ಟ್ಗಳನ್ನು ಅವರು ಹಂಚಿಕೊಳ್ಳುತ್ತಾರೆ.
1 / 6
ಮಲ್ಲಿಕಾ ಶೆರಾವತ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಮಿಂಚಿದ್ದರು. ಬೋಲ್ಡ್ ಪಾತ್ರಗಳ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಕಿಸ್ಸಿಂಗ್ ಸೀನ್, ಅರೆ ನಗ್ನ ದೃಶ್ಯಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದರು. ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಅಲ್ಲಿ ಒಂದು ಇಂಟಿಮೇಟ್ ದೃಶ್ಯ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ನಿರ್ದೇಶಕರು ಇಡುತ್ತಿದ್ದರು.
2 / 6
ಒಂದು ಹಂತದ ನಂತರ ಮಲ್ಲಿಕಾ ನಟನೆಯಿಂದ ದೂರ ಉಳಿದುಕೊಂಡರು. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ನಿತ್ಯ ಹೊಸ ಪೋಸ್ಟ್ಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಪ್ರಯತ್ನ ಮಾಡುತ್ತಾರೆ.
3 / 6
ಈಗ ಮಲ್ಲಿಕಾ ಹೊಸ ಫೋಟೋ ಮೂಲಕ ಸುದ್ದಿಯಾಗಿದ್ದಾರೆ. ಇಂದು (ಮಾರ್ಚ್ 8) ಮಲ್ಲಿಕಾ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಕಪ್ ಹಿಡಿದು ಕೂತಿದ್ದಾರೆ. ಈ ಫೋಟೋದಲ್ಲಿ ಅವರು ಟಾಪ್ ಮಾತ್ರ ಧರಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅವರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
4 / 6
ಮಲ್ಲಿಕಾಗೆ ಈಗ 45 ವರ್ಷ ವಯಸ್ಸು. ಆದರೂ ಸಖತ್ ಫಿಟ್ ಆಗಿದ್ದಾರೆ. ಅವರು ಸಾಕಷ್ಟು ಡಯಟ್ ಫಾಲೋ ಮಾಡುತ್ತಾರೆ. ಈ ಬಗ್ಗೆ ಅವರು ಹೆಚ್ಚು ಗಮನ ವಹಿಸುತ್ತಾರೆ.
5 / 6
ಮಲ್ಲಿಕಾ ಶೆರಾವತ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ. ಅವರು ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ. 2019ರ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.
6 / 6
ಮಲ್ಲಿಕಾ ಶೆರಾವತ್
Published On - 5:32 pm, Tue, 8 March 22