AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ

'Freedom 251': ಆ ಬಳಿಕ ಮೋಹಿತ್ ಗೋಯೆಲ್ ಹೆಸರು ಕೇಳಿ ಬಂದಿದ್ದು 2021 ರಲ್ಲಿ. ಅದು ಕೂಡ ಹಗರಣದಿಂದಲೇ ಎಂಬುದು ವಿಶೇಷ.

TV9 Web
| Edited By: |

Updated on:Aug 29, 2021 | 10:45 PM

Share
ಅದು 2016, ಭಾರತೀಯ ಮೊಬೈಲ್ ಕ್ಷೇತ್ರದ ಕಂಪೆನಿಗಳು ಒಂದೇ ಒಂದು ಸುದ್ದಿಯಿಂದ ಬೆಚ್ಚಿ ಬಿದ್ದಿತ್ತು. ಆ ಸುದ್ದಿ ಏನೆಂದರೆ ಫ್ರೀಡಂ 251 ಸ್ಮಾರ್ಟ್​ಫೋನ್ ಬಿಡುಗಡೆ. ಹೌದು, ಅಂದು ಫ್ರೀಡಂ ಹೆಸರಿನ ಮೊಬೈಲ್​ ಅನ್ನು ಕೇವಲ 251 ರೂ.ಗೆ ನೀಡುವುದಾಗಿ ರಿಂಗಿಂಗ್ ಬೆಲ್ಸ್ ಎನ್ನುವ ಕಂಪೆನಿ ಘೋಷಿಸಿತ್ತು. ಈ ಘೋಷಣೆಯ ಬೆನ್ನಲ್ಲೇ ಜಾಹೀರಾತುಗಳು ರಾರಾಜಿಸಿದ್ದವು. ಜಾಹೀರಾತು ನೋಡಿ ಜನರು ಕೂಡ ತಾ ಮುಂದು ನಾ ಮುಂದು ಎಂದು ಬುಕ್ಕಿಂಗ್ ಮಾಡಿದ್ದರು. ಇಂಡಿಯಾ.ಕಾಮ್ ವರದಿ ಪ್ರಕಾರ ಅಂದು 2 ದಿನದಲ್ಲಿ ಹೊಸ ಸ್ಮಾರ್ಟ್​ಫೋನ್ ಬುಕ್ಕಿಂಗ್ ಮೂಲಕ ರಿಂಗಿಂಗ್ ಬೆಲ್ಸ್ ಕಂಪೆಮಿ ಗಳಿಸಿದ ಆದಾಯ  63 ಕೋಟಿ ರೂ. ಆಮೇಲೇನಾಯ್ತು?

1 / 7
ಇತ್ತ ಹಣ ನೀಡಿದವರು ಹೊಸ ಮೊಬೈಲ್​ಗಾಗಿ ಒಂದು ವರ್ಷ ಕಾದರು. ಕಂಪೆನಿ ಬಹುತೇಕ ಮಂದಿಗೆ ಫೋನ್ ತಲುಪಿಸಿರುವುದಾಗಿ ಹೇಳಿಕೊಂಡಿತ್ತು. ಇತ್ತ ಅನೇಕರು ವರ್ಷಗಳು ಕಳೆದರೂ ಮೊಬೈಲ್ ಮಾತ್ರ ಕೈ ಸೇರಿಲ್ಲ ಎಂದು ಆರೋಪಿಸಿದರು. ಅದರಂತೆ ರಿಂಗಿಂಗ್ ಬೆಲ್ಸ್ ವಿರುದ್ದ ದೂರು ದಾಖಲಾಯಿತು. ಕಂಪೆನಿಯ ಮಾಲೀಕ ಮೋಹಿತ್ ಗೋಯೆಲ್ ಅವರನ್ನು ವಂಚನೆ ಮತ್ತು ಸುಲಿಗೆ ಪ್ರಕರಣದಡಿ ಬಂಧಿಸಲಾಯಿತು.

2 / 7
ನಿರೀಕ್ಷೆಯಂತೆ ದಿನಗಳ ಒಳಗೆ ಗೋಯಲ್ ಜಾಮೀನು ಪಡೆದು ಹೊರಬಂದರು. ಆದರೆ ಕಡಿಮೆ ದರಕ್ಕೆ ಮೊಬೈಲ್ ನಿರೀಕ್ಷಿಸಿದ್ದ ಜನರ ದುಡ್ಡನ್ನು ಇನ್ನೂ ಕೂಡ ವಾಪಸ್ ಮಾಡಿಲ್ಲ ಎಂಬ ಅಪಾದನೆ ಇನ್ನೂ ರಿಂಗಿಂಗ್ ಬೆಲ್ಸ್ ಮೇಲಿದೆ. ಫ್ರೀಡಂ 251 ಸ್ಮಾರ್ಟ್​ಫೋನ್  ಹೆಸರಿನಲ್ಲಿ ರಿಂಗಿಂಗ್ ಬೆಲ್ಸ್ ಕಂಪೆನಿ ಕೋಟಿ ಲೆಕ್ಕದಲ್ಲಿ ಆದಾಯ ಗಳಿಸಿತ್ತು. ಅದರಲ್ಲಿ ಎಷ್ಟು ಮಂದಿಗೆ ಕಂಪೆನಿಯು ಹಣ ಮರು ಪಾವತಿಸಿದೆ ಎಂಬುದು ಮಾತ್ರ ಇನ್ನೂ ನಿಗೂಢ. ಈ ಹಗರಣ ಇದೀಗ ಜನರು ಕೂಡ ಮರೆತಿದ್ದಾರೆ. ಇದೀಗ ಫ್ರೀಡಂ 251 ಸ್ಕ್ಯಾಮ್ ಮುಗಿದ ಅಧ್ಯಾಯ ಎನ್ನಬಹುದು.

3 / 7
ಆ ಬಳಿಕ ಮೋಹಿತ್ ಗೋಯೆಲ್ ಹೆಸರು ಕೇಳಿ ಬಂದಿದ್ದು 2021 ರಲ್ಲಿ. ಅದು ಕೂಡ ಹಗರಣದಿಂದಲೇ ಎಂಬುದು ವಿಶೇಷ. ಆದರೆ ಈ ಬಾರಿ ಕೋಟಿ ಹೋಗಿ ಡಬಲ್ ಕೋಟಿಯಾಗಿತ್ತು. ಹೌದು, 200 ಕೋಟಿ ಡ್ರೈ ಫ್ರೂಟ್ಸ್​ ಹಗರಣದಲ್ಲಿ ಮೋಹಿತ್ ಪ್ರಮುಖ ಆರೋಪಿಯಾಗಿದ್ದರು. ಅಲ್ಲದೆ ಜನವರಿಯಲ್ಲಿ ನೋಯ್ಡಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹಿತ್ ಗೋಯೆಲ್​ರನ್ನು ಬಂಧಿಸಿದ್ದರು. ಆ ಬಳಿಕ ಮತ್ತೆ ಜಾಮೀನಿನಲ್ಲಿ ಹೊರ ಬಂದಿದ್ದರು.

4 / 7
ಇದಾದ ಬಳಿಕ ಇದೀಗ ಮತ್ತೆ ಗೋಯೆಲ್ ಹೆಸರು ಸುದ್ದಿಯಲ್ಲಿದೆ. ಈ ಬಾರಿ ಕೂಡ ವಂಚನೆ ಪ್ರಕರಣದಿಂದಲೇ ಸುದ್ದಿಯಾಗಿದ್ದಾರೆ. ಆಗಸ್ಟ್. 19 ರಂದು ವಿಕಾಸ್ ಮಿತ್ತಲ್ ಎಂಬವರು ಮೋಹಿತ್ ಗೋಯಲ್ ಮತ್ತು ಇತರ ಐವರ ವಿರುದ್ಧ 41 ಲಕ್ಷ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದರು.

5 / 7
ಈ ಸಂಬಂಧ  ಮೋಹಿತ್ ಗೋಯಲ್ ವಿಕಾಸ್ ಮಿತ್ತಲ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಆಗಸ್ಟ್ 19 ರಂದು ಮಿತ್ತಲ್  ಮೇಲೆ ಕಾರು ಹರಿಸಿ ಕೊಲ್ಲಲು ಪ್ರಯತ್ನಿಸಿದ್ದರು. ಅಂದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ ವಿಕಾಸ್ ಮಿತ್ತಲ್ ಆರೋಪಿ ಗೋಯೆಲ್ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

6 / 7
ಇದೀಗ ನೋಯ್ಡಾ ಪೊಲೀಸರು ಮೋಹಿತ್ ಗೋಯೆಲ್ ವಿರುದ್ದ ಐಪಿಸಿ ಸೆಕ್ಷನ್ 420 (ವಂಚನೆ), 384 (ಸುಲಿಗೆ), 386 (ಕೊಲೆಯ ಭೀತಿ), 323 (ನೋವುಂಟು ಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಜೊತೆ ಸೆಕ್ಷನ್ 506 (ಬೆದರಿಕೆ), 307 (ಕೊಲೆ ಯತ್ನ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲೂ ಪ್ರಕರಣ ದಾಖಲಿಸಿ ಮೋಹಿತ್ ಗೋಯೆಲ್​ನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಸದಾ ವಂಚನೆಯೊಂದಿಗೆ ಕೇಳಿ ಬರುತ್ತಿದ್ದ ಮೋಹಿತ್ ಗೋಯೆಲ್ ಹೆಸರು ಈ ಬಾರಿ ಕೊಲೆ ಬೆದರಿಕೆಲ್ಲೂ ಕೇಳಿಸಿಕೊಂಡಿದೆ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.

7 / 7

Published On - 8:11 pm, Sun, 29 August 21