ತಂದೆಯ ಕೈ ಇಂದಲೇ ಬ್ಯಾಟನ್ ಪಡೆಯುವುದರ ಮೂಲಕ ಪುತ್ರಿ ಪಿಎಸ್ಐ ಆಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಅಧಿಕಾಯ ಹಸ್ತಾಂತರಿಸಿದ ಬಳಿಕ ತಂದೆ ಹೇಳಿದ್ದೇನು? ಪುತ್ರಿ ಭಾವುಕರಾಗಿದ್ದು ಯಾಕೆ? ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು? ಇಲ್ಲಿದೆ ಸಚಿತ್ರ ವರದಿ.
ತಂದೆಯ ಕೈನಿಂದಲೇ ಅಧಿಕಾರ ಸ್ವೀಕರಿಸಿದ ಲೇಡಿ ಪಿಎಸ್ಐ..!! ಅಧಿಕಾರ ಸ್ವೀಕರಿಸಿದ ಲೇಡಿ ಪಿಎಸ್ಐ ವರ್ಷಾರಿಂದ ಭಾವುಕ ಮಾತು..!!
ಕೈಯಲ್ಲಿ ಬೊಕ್ಕೆ ಹಿಡಿದು ಅಧಿಕಾರ ಹಸ್ತಾಂತರ ನಡೆಸುತ್ತಿರುವ ಪಿಎಸ್ಐ.. ಬೊಕ್ಕೆ ಸ್ವೀಕರಿಸಿ ಆಸನವನ್ನ ಅಲಂಕರಿಸಿದ ಮತ್ತೊರ್ವ ಲೇಡಿ ಪಿಎಸ್ಐ.. ಇದು ಯಾವುದೇ ಒಬ್ಬ ಅಧಿಕಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಆದಾಗ ಬೇರೊಬ್ಬ ಅಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ರಿಲೀವ್ ಆಗ್ತಾರೆ.
ಆದ್ರೆ ಇದಲ್ಲೇನು ವಿಶೇಷ ಅಂದ್ರೆ ತನ್ನ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗೆ ಮಗಳೇ ಪಿಎಸ್ಐಯಾಗಿ ಅಪಾಯಿಂಟ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಇಂತಹ ವಿಶೇಷ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆ ವೆಂಕಟೇಶ್ ರವರ ಪುತ್ರಿ ಈಗ ಪಿಎಸ್ಐಯಾಗಿ ಅದೇ ಠಾಣೆಗೆ ಪೋಸ್ಟಿಂಗ್ ಪಡೆದಿದ್ದು ಅಲ್ದೆ ತನ್ನ ತಂದೆ ಕೈಯಿಂದಲೇ ಅಧಿಕಾರ ಸ್ವೀಕರಿಸಿ ಭಾವುಕರಾಗಿದ್ದಾರೆ.
ಪುತ್ರಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಂಎ ಪದವೀಧರೆ. ಆದ್ರೆ ತಂದೆಯ ಕಾರ್ಯವೈಖರಿ, ಅವರ ಕರ್ತವ್ಯನಿಷ್ಠೆ ನೋಡುತ್ತಾ ಬೆಳೆದ ಪುತ್ರಿ ವರ್ಷಾ ಸಹ 2022ರಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದರು. ಒಂದು ವರ್ಷ ಕಾಲ (ಕಲಬುರ್ಗಿಯಲ್ಲಿ) ಪ್ರೊಬೆಷನರಿ ಅವಧಿ ಮುಗಿಸಿದ ಬಳಿಕ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಟ್ರಲ್ ಪೊಲೀಸ್ ಠಾಣೆಗೆ ಪಿಎಸ್ಐಯಾಗಿ ಅಧಿಕಾರ ಸ್ವೀಕರಿಸಿದರೆ, ತಂದೆ ವೆಂಕಟೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ.
ತಂದೆ ವೆಂಕಟೇಶ್ ಕಳೆದ 16 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ (Indian Army - 1990 to 2006) ಕರ್ತವ್ಯ ನಿರ್ವಹಿಸಿದ್ದಾರೆ.
ಚೀನಾ, ಬಾಂಗ್ಲಾ, ಪಾಕಿಸ್ತಾನ ಬಾರ್ಡರ್ ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ 2010 ರಲ್ಲಿ ಪಿಎಸ್ಐ ಪರಿಕ್ಷೆಯಲ್ಲಿ ಉತ್ತೀರ್ಣರಾಗಿ ಸೇನಾ ಕೋಟದ ಮೇಲೆ ಅಪಾಯಿಂಟ್ ಆಗಿದ್ದರು. ನಾಲ್ಕೈದು ವರ್ಷದಿಂದ ಮಂಡ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಜನಪರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿಎಸ್ಐ ಪಿಎಸ್ಐ ಮೂಲತಃ ತುಮಕೂರುಬ ಜಿಲ್ಲೆ ಕುಣಿಗಲ್ ತಾಲೂಕು ತೊರೆಬೊಮ್ಮನಹಳ್ಳಿ ಗ್ರಾಮದವರು. 16 ವರ್ಷ ದೇಶ ಸೇವೆ ಸಲ್ಲಿಸಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದ ಅಪ್ಪ, ಪೊಲೀಸ್ ಅಧಿಕಾರಿಯಾಗಿ ಬಂದ ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಭಾವುಕ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ. ಪೊಲೀಸ್ ಕೆಲಸವೇ ಹಾಗೆ, ಯಾರಿಗೇ ಆಗಲಿ ಅದು ಉತ್ತೇಜನಕಾರಿ, ಅಂತಹುದರಲ್ಲಿ ಮಗಳೇ ಅಪ್ಪನಿಂದ ಸಬ್ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಭಾವನಾತ್ಮಕ ಕ್ಷಣ
Mandya Superintendent of Police - ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Published On - 9:23 am, Thu, 22 June 23