ಒಮ್ಮೆ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದವರು ಅವರು. ಇಂದು ಕೋಟ್ಯಂತರ ರೂ. ಸಾಮ್ರಾಜ್ಯ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಲಕ್ಷಗಟ್ಟಲೆ ಹಣ ಗಳಿಸಲು ಒದ್ದಾಡುತ್ತಿದ್ದರು. ಆದರೆ ಆ ಒಂದು ಉಪಾಯ ಆತನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.