- Kannada News Photo gallery Milana Nagaraj and Darling Krishna pics Pregnancy Photoshoot Entertainment news in Kannada
ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಚಂದದ ಫೋಟೋಶೂಟ್ ಮಾಡಿಸಿದ ಮಿಲನಾ
‘ಲವ್ ಮಾಕ್ಟೇಲ್’ ಕ್ಯೂಟ್ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಬಾಳಿನಲ್ಲಿ ಈಗ ಖುಷಿ ತುಂಬಿದೆ. ಮಗುವಿನ ಆಗಮನಕ್ಕಾಗಿ ಕಾದಿರುವ ಅವರು ಫೋಟೋಶೂಟ್ಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಮಿಲನಾ ಅವರು ತಾಯಿ ಆಗುತ್ತಿರುವ ಖುಷಿಯಲ್ಲಿ ಕ್ಯಾಮೆರಾ ಎದುರಿಸಿದ ಚಂದದ ಫೋಟೋಗಳು ಇಲ್ಲಿವೆ..
Updated on: Aug 25, 2024 | 10:38 PM

ನಟಿ ಮಿಲನಾ ನಾಗರಾಜ್ ಅವರು ತಾಯಿ ಆಗುತ್ತಿದ್ದಾರೆ. ಈ ಖುಷಿಯಲ್ಲಿ ಅವರು ಹಲವು ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರೆಗ್ನೆಂಟ್ ಆಗಿರುವುದರಿಂದ ಮಿಲನಾ ನಾಗರಾಜ್ ಅವರು ಸಿನಿಮಾದ ಕೆಲಸಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೂ ಕೂಡ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ.

ಪರಸ್ಪರ ಪ್ರೀತಿಸಿ ಮದುವೆಯಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ. ಈ ಜೋಡಿಗೆ ಆಪ್ತರು, ಅಭಿಮಾನಿಗಳು ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.

ಹಲವು ವರ್ಷಗಳಿಂದ ಮಿಲನಾ ನಾಗರಾಜ್ ಅವರು ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಮಿಲನಾ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.

ಬದುಕಿನ ಈ ಹಂತವನ್ನು ಮಿಲನಾ ಅವರು ಎಂಜಾಯ್ ಮಾಡುತ್ತಿದ್ದಾರೆ. ಖುಷಿ ಖುಷಿಯಾಗಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಮಿಲನಾ ಯಶಸ್ಸು ಕಂಡಿದ್ದಾರೆ.




