- Kannada News Photo gallery Milana Nagaraj Shares Her Baby Bump photos On Instagram she is now 7 and half month pregnant Cinema News
ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್
ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪರಸ್ಪರ ಪ್ರೀತಿಸಿ ಮದುವೆ ಆದರು. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಒಂದಾಗದ ಇವರು ನಿಜ ಜೀವನದಲ್ಲಿ ಒಟ್ಟಿಗೆ ಸೇರಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈಗ ಮಿಲನಾ ತಾಯಿ ಆಗುತ್ತಿದ್ದಾರೆ.
Updated on: Jul 27, 2024 | 10:29 AM

ನಟಿ ಮಿಲನಾ ನಾಗರಾಜ್ ಅವರು ಈ ವರ್ಷದ ಆರಂಭದಲ್ಲಿ ಹೊಸ ಸುದ್ದಿ ಒಂದನ್ನು ನೀಡಿದ್ದರು. ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಘೋಷಣೆ ಮಾಡಿದ್ದರು. ಆ ಬಳಿಕ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ.

ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪರಸ್ಪರ ಪ್ರೀತಿಸಿ ಮದುವೆ ಆದರು. ತೆರೆಮೇಲೆ ಒಂದಾಗದ ಇವರು ನಿಜ ಜೀವನದಲ್ಲಿ ಒಟ್ಟಿಗೆ ಸೇರಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈಗ ಮಿಲನಾ ತಾಯಿ ಆಗುತ್ತಿದ್ದಾರೆ.

ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಆ ದಿನಕ್ಕಾಗಿ ಅವರ ಕುಟುಂಬ ಹಾಗೂ ಫ್ಯಾನ್ಸ್ ಕಾದಿದ್ದಾರೆ. ಇದಕ್ಕೂ ಮೊದಲು ವಿವಿಧ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇದ್ದಾರೆ.

ಈಗ ತುಂಬು ಗರ್ಭಿಣಿ ಆಗಿ ಮಿಲನಾ ನಾಗರಾಜ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಪತಿಯ ಜೊತೆ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಮಿಲನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಮಗು ಜನಿಸಿದ ಬಳಿಕ ಅದರ ಆರೈಕೆಯಲ್ಲಿ ಅವರು ಬ್ಯುಸಿ ಆಗಲಿದ್ದಾರೆ.




