AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Statue of Equality: ರಾಮಾನುಜರ ಪ್ರತಿಮೆ ದೇಶದ ಮಹಾನ್ ಆಸ್ತಿ: ಅನುರಾಗ್ ಠಾಕೂರ್ ಹೇಳಿಕೆ

Ramanujacharya Sahasrabdi: ರಾಮಾನುಜರ ಪ್ರತಿಮೆ ದೇಶದ ಮಹಾನ್ ಆಸ್ತಿ ಇದ್ದಂತೆ. ನಾರಾಯಣ ಸೇವೆಯೇ ಮುಖ್ಯ ಎಂದು ಸಮಾಜಕ್ಕೆ ಸಾರಿದ್ದರು. ರಾಮಾನುಜರ ಪ್ರತಿಮೆ ಎಲ್ಲಾ ವರ್ಗದವರಿಗೂ ಪ್ರೇರಣೆ ಆಗಲಿದೆ ಎಂದು ರಾಮಾನುಜರ ಪ್ರತಿಮೆ ಸ್ಥಳದಲ್ಲಿ ಅನುರಾಗ್ ಠಾಕೂರ್‌ ಮಾತನಾಡಿದ್ದಾರೆ.

TV9 Web
| Updated By: ganapathi bhat|

Updated on:Feb 13, 2022 | 11:21 PM

Share
ಹೈದರಾಬಾದ್​ನ ಹೊರವಲಯದಲ್ಲಿ ಇರುವ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್​ನಲ್ಲಿ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ/ ಸಹಸ್ರಾಬ್ದಿ ಕಾರ್ಯಕ್ರಮ ನಡೆಯುತ್ತಿದೆ. ರಾಮಾನುಜರ ಪ್ರತಿಮೆ ಸ್ಥಳಕ್ಕೆ ಭಾನುವಾರ (ಫೆಬ್ರವರಿ 13) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್‌ ಭೇಟಿ ನೀಡಿದ್ದಾರೆ. ಈ ವೇಳೆ, ತ್ರಿದಂಡಿ ಚಿನ್ನಜೀಯರ್​ಶ್ರೀ, ಮೈ ಹೋಮ್ಸ್‌ ಗ್ರೂಪ್ ಚೇರ್ಮನ್ ಡಾ.ರಾಮೇಶ್ವರ ರಾವ್‌ ಉಪಸ್ಥಿತಿ ವಹಿಸಿದ್ದಾರೆ.

1 / 6
ಕಾರ್ಯಕ್ರಮ ಉದ್ದೇಶಿಸಿ ಸಚಿವ ಅನುರಾಗ್ ಠಾಕೂರ್‌ ಭಾಷಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು. ರಾಮಾನುಜರ ಬೃಹತ್‌ ಪ್ರತಿಮೆ ಸ್ಥಾಪಿಸಿದ್ದಕ್ಕೆ ಧನ್ಯವಾದಗಳು. ರಾಮಾನುಜರ ಪ್ರತಿಮೆ ದೇಶದ ಮಹಾನ್ ಆಸ್ತಿ ಇದ್ದಂತೆ. ನಾರಾಯಣ ಸೇವೆಯೇ ಮುಖ್ಯ ಎಂದು ಸಮಾಜಕ್ಕೆ ಸಾರಿದ್ದರು. ರಾಮಾನುಜರ ಪ್ರತಿಮೆ ಎಲ್ಲಾ ವರ್ಗದವರಿಗೂ ಪ್ರೇರಣೆ ಆಗಲಿದೆ ಎಂದು ರಾಮಾನುಜರ ಪ್ರತಿಮೆ ಸ್ಥಳದಲ್ಲಿ ಅನುರಾಗ್ ಠಾಕೂರ್‌ ಮಾತನಾಡಿದ್ದಾರೆ.

2 / 6
ಸಮಾಜದ ಏಳಿಗೆಗಾಗಿ ಇಡೀ ಜೀವನವನ್ನು ರಾಮಾನುಜರು ತ್ಯಾಗ ಮಾಡಿದ್ದರು. ಸಮಾಜದಲ್ಲಿನ ಭೇದ, ಭಾವ ನಿವಾರಣೆಗಾಗಿ ಶ್ರಮಿಸಿದ್ದರು. ರಾಮಾನುಜರು ಎಲ್ಲರನ್ನೂ ಸಮಾನತೆಯಿಂದ ನೋಡ್ತಿದ್ದರು. ಶ್ರೀರಾಮಾನುಜರು ಭಾರತದ ಸಂಸ್ಕೃತಿಯ ಪ್ರತೀಕವಿದ್ದಂತೆ ಎಂದು ಅನುರಾಗ್ ಠಾಕೂರ್‌ ಹೇಳಿದ್ದಾರೆ. ಇದಕ್ಕೂ ಮೊದಲು, ಶ್ರೀರಾಮನಗರಂನಲ್ಲಿ ನಿರ್ಮಿಸಿರುವ 216 ಅಡಿ ಎತ್ತರದ ಪ್ರತಿಮೆಯನ್ನು ಅನುರಾಗ್ ಠಾಕೂರ್ ಕಣ್ತುಂಬಿಕೊಂಡಿದ್ದಾರೆ. ದಿವ್ಯ ಸಾಕೇತಂ ಆಶ್ರಮದಲ್ಲಿನ 108 ದೇವಾಲಯಗಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

3 / 6
ಇಂದು (ಫೆಬ್ರವರಿ 13) ಶ್ರೀರಾಮಾನುಜಾಚಾರ್ಯರ 120 ಕೆಜಿಯ ಚಿನ್ನದ ವಿಗ್ರಹವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನಾವರಣಗೊಳಿಸಿದ್ದರು. ಈ ವೇಳೆ, ರಾಷ್ಟ್ರಪತಿ ಕೋವಿಂದ್‌ರವರ ಪತ್ನಿ ಸವಿತಾ ಕೂಡ ಉಪಸ್ಥಿತರಿದ್ದರು. ಶ್ರೀರಾಮಾನುಜರ ಪ್ರತಿಮೆ ಸ್ಥಾಪನೆ ಐತಿಹಾಸಿಕ ನಿರ್ಧಾರ. ಇದಕ್ಕೆ ಶ್ರಮಿಸಿದ ತ್ರಿದಂಡಿ ಚಿನ್ನಜೀಯರ್​ ಸ್ವಾಮೀಜಿ ಹಾಗೂ ಡಾ.ಜೆ. ರಾಮೇಶ್ವರ ರಾವ್‌ಗೆ ಧನ್ಯವಾದಗಳು ಎಂದು ಕೋವಿಂದ್ ತಿಳಿಸಿದ್ದರು.

4 / 6
ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ/ ಸಹಸ್ರಾಬ್ದಿ ಕಾರ್ಯಕ್ರಮವು ಕಳೆದ 11 ದಿನಗಳಿಂದ ನಡೆಯುತ್ತಿದೆ. ಸಮಾನತೆಯ ಮೂರ್ತಿ ಕ್ಷೇತ್ರ ಜೈ ಶ್ರೀಮನ್ನಾರಾಯಣ ನಾಮಸ್ಮರಣೆಯೊಂದಿಗೆ ಭಕ್ತಿಭಾವದಲ್ಲಿ ತುಂಬಿದೆ. ವೇದ ಮಂತ್ರಗಳು, ಅಷ್ಟೋತ್ತರ ನಾಮಗಳು ಮತ್ತು ಶ್ರೀ ಲಕ್ಷ್ಮೀನರಸಿಂಹನ ಸ್ತೋತ್ರಗಳಿಂದ ರಾಮನಗರವು ಧಾರ್ಮಿಕ ಕಳೆ ಇಮ್ಮಡಿಯಾಗಿದೆ.

5 / 6
ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಮಾನತೆಯ ಪ್ರತಿಮೆ ವಿಶ್ವದಲ್ಲೇ ಎರಡನೇ ಅತ್ಯಂತ ಎತ್ತರದ ಕುಳಿತ ಭಂಗಿಯಲ್ಲಿ ಇರುವ ವಿಗ್ರಹ ಎಂದು ಖ್ಯಾತಿ ಪಡೆದಿದೆ. ಸ್ಥಳಕ್ಕೆ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸಹಿತ ವಿವಿಧ ವಲಯದ ಗಣ್ಯರು ಭೇಟಿ ನೀಡುತ್ತಿದ್ದಾರೆ.

6 / 6

Published On - 11:20 pm, Sun, 13 February 22