Hassan News: ತೋಟಕ್ಕೆ ದಾಂಗುಡಿ ಇಟ್ಟ ಆನೆ ಹಿಂಡು, ಕ್ಷಣಾರ್ಧದಲ್ಲಿ ಕಾಫಿ ತೋಟ ಸರ್ವನಾಶ
ಹಾಸನದಲ್ಲಿ ಒಂದೇ ಗುಂಪಿನಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ತೋಟವನ್ನೆಲ್ಲ ನಾಶ ಮಾಡಿದೆ. ಕಾಫಿಯ ಜೊತೆಗೆ ರೈತರು ಬೆಳೆದಿರೋ ಬೆಳೆಗಳನ್ನೆಲ್ಲಾ ತುಳಿದು ಹಾಳು ಮಾಡಿದೆ.
Updated on: Jul 05, 2023 | 1:50 PM
Share

ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಬೇಲೂರು ತಾಲೂಕಿನ ಅಂಕಿಹಳ್ಳಿಪೇಟೆ ಗ್ರಾಮದ ಕಾಫಿತೋಟದಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಸಂಚರಿಸುತ್ತಿವೆ.

ಒಂದೇ ಗುಂಪಿನಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ತೋಟವನ್ನೆಲ್ಲ ನಾಶ ಮಾಡಿದೆ. ಕಾಫಿಯ ಜೊತೆಗೆ ರೈತರು ಬೆಳೆದಿರೋ ಬೆಳೆಗಳನ್ನೆಲ್ಲಾ ತುಳಿದು ಹಾಳು ಮಾಡಿದೆ.

ಕಾಡಾನೆಗಳ ಗುಂಪುನ್ನು ಕಂಡು ಜನ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸ್ಥಳೀಯರಿಗೆ ಕಾಡಾನೆಗಳ ಚಲನವಲಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡ್ತಿದ್ದಾರೆ.

ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಯಾವಾಗ ಬೇಗಾದ್ರು ದಾಳಿ ಮಾಡಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನವನ್ನು ಟ್ರೇಸ್ ಮಾಡಿ ಸ್ಥಳೀಯರಿಗೆ ಆ ಕಡೆ ಹೋಗದಂತೆ ಎಚ್ಚರಿಸುತ್ತಿದ್ದಾರೆ.

ಹಿಂಡು ಹಿಂಡು ಆನೆಗಳ ಗುಂಪನ್ನು ನೋಡಿ ಆತಂಕದಲ್ಲಿರುವ ಸ್ಥಳೀಯರು ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
Related Photo Gallery
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ
ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ: ಹಾಲಿಗೆ ಪ್ರೋತ್ಸಾಧನ ಏರಿಕೆ
ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ
ಚಪ್ಪಲಿ ವಿಚಾರಕ್ಕೆ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ



